ಆನೇಕಲ್:ಡಾ. ಬಿ.ಆರ್. ಅಂಬೇಡ್ಕರ್ ಸಮಾಜದ ಕಟ್ಟ ಕಡೆಯ, ಎಲ್ಲ ಜಾತಿ, ವರ್ಗದ ಶೋಷಿತರಿಗೆ ರಾಜಕೀಯ, ಸಾಮಾಜಿಕ ಸ್ಥಾನಮಾನವನ್ನು ಸಾಂವಿಧಾನಿಕ ನೆಲೆಯಲ್ಲಿ ಕಲ್ಪಿಸಿಕೊಟ್ಟ ಮಾಹಾನ್ ಮಾನವತಾವಾದಿ. ಜಗತ್ತಿನ ಸಂವಿಧಾನಗಳನ್ನ ಒಮ್ಮೆ ತಿರಿವು ಹಾಕಿದರೆ ಅತೀ ಶ್ರೇಷ್ಠ ಸಂವಿಧಾನ ಎಂತಲೇ ಕರೆಸಿಕೊಳ್ಳುವ ಏಕೈಕ ಸಂವಿಧಾನ ಕೊಟ್ಟ ಮಹಾನ್ ಪುರುಷ ಎಂದು ಆನೇಕಲ್ ಶಾಸಕ ಬಿ.ಶಿವಣ್ಣ ಹೇಳಿದರು.
ಆನೇಕಲ್ ತಾಲೂಕಿನ ಕರಕಲಘಟ್ಟದಲ್ಲಿ ಕರುನಾಡ ಪ್ರಜಾ ಸೇನೆ, ಡಾ. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಏರ್ಪಡಿಸಿದ್ದ 128ನೇ ಜನ್ಮ ದಿನಾಚರಣೆಯ ವೇದಿಕೆಯಲ್ಲಿ ಅವರು ಮಾತನಾಡಿದರು.