ಕರ್ನಾಟಕ

karnataka

By

Published : Jul 9, 2023, 12:33 PM IST

ETV Bharat / state

ದೊಡ್ಡಬಳ್ಳಾಪುರ: ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆಯಲ್ಲಿ ವೋಟಿಂಗ್‌ ಮಷಿನ್‌ಗಳು ಪತ್ತೆ!

ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಸಂಬಂಧ ಮನೆ ನೆಲಸಮಗೊಳಿಸುವಾಗ ಇವಿಎಂ ಕಂಟ್ರೋಲ್ ಯೂನಿಟ್‌ಗಳು ಪತ್ತೆಯಾಗಿವೆ.

Doddaballapura
ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ:ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಶನಿವಾರ ಮನೆ ಕೆಡವುವಾಗ ಇಂಜಿನಿಯರ್​ವೊಬ್ಬರ ಮನೆಯಲ್ಲಿ ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (EVM) ಕಂಟ್ರೋಲ್ ಯುನಿಟ್‌‌ಗಳು ದೊರೆತಿವೆ. ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮೋಪರಹಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ಅವರ ಮನೆ ನೆಲಸಮಗೊಳಿಸುವಾಗ ಅಚ್ಚರಿ ಕಾದಿತ್ತು. ಇವು 2018ರ ಚುನಾವಣೆಯಲ್ಲಿ ಬಳಸಿ ತಿರಸ್ಕೃತಗೊಂಡ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್​ಗಳು ಎಂದು ತಹಶೀಲ್ದಾರ್ ಮೋಹನ ಕುಮಾರಿ ಮಾಹಿತಿ ನೀಡಿದರು. ಸ್ಥಳಕ್ಕೆ ತಹಶೀಲ್ದಾರ್ ಮೋಹನ ಕುಮಾರಿ ಭೇಟಿ ನೀಡಿ ಪರಿಶೀಲಿಸಿ 7 ಮಷಿನ್​ಗಳನ್ನು ವಶಕ್ಕೆ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ABOUT THE AUTHOR

...view details