ಆನೇಕಲ್: ತಮಿಳುನಾಡಿನ ಕೃಷ್ಣಗಿರಿ ಕಾಡಿನಿಂದ ಆವಲಹಳ್ಳಿ ಜಲಾಶಯದ ಮುಖಾಂತರ ಆನೇಕಲ್ಗೆ ಮತ್ತೆರೆಡು ಆನೆಗಳು ಧಾವಿಸಿವೆ.
ನಾಡಿನತ್ತ ಮುಖಮಾಡಿದ 'ಗಜ'ಪಡೆ... - ಕೃಷ್ಣಗಿರಿ ಕಾಡು
ಗ್ರಾಮಗಳತ್ತ ಆಗಮಿಸುತ್ತಿರುವ ಆನೆಗಳನ್ನು ಓಡಿಸಲು ಆನೇಕಲ್ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸುತ್ತಿದ್ದಾರೆ.

ಕೃಷ್ಣಗಿರಿ ಕಾಡಿನಿಂದ ಒಟ್ಟಾರೆ 20 ದಿನಗಳಿಂದ ರಾಜ್ಯದ ಗಡಿಭಾಗದ ಬಾಗಲೂರು, ಮಾಸ್ತಿ, ಮಾಲೂರು ಕಡೆಗೆ ಐದಾನೆಗಳು ನಾಡಿಗೆ ಬಂದಿವೆ. ಈ ಕಾಡಾನೆಗಳು ಸರ್ಜಾಪುರ-ಚಿಕ್ಕ ತಿರುಪತಿ ರಸ್ತೆಯ ಪಂಡಿತನ ಅಗ್ರಹಾರದ ಬಳಿ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.
ಮಾಸ್ತಿ ಕಡೆಯಿಂದ ಆನೇಕಲ್ಗೆ ಆಗಮಿಸಿರುವ ಎರಡು ಆನೆಗಳಲ್ಲಿ ಒಂದಕ್ಕೆ ದಂತ ಅರ್ಧ ಮುರಿದಿದೆ. ಇಲ್ಲಿಗೆ ಬರುವುದಕ್ಕೂ ಮುನ್ನ ಇಬ್ಬರನ್ನ ತಮಿಳುನಾಡಿನಲ್ಲಿ ಬಲಿ ತೆಗೆದುಕೊಂಡಿವೆ. ಇದರಿಂದ ಜನ ಆತಂಕದಲ್ಲಿದ್ದಾರೆ. ಗ್ರಾಮಗಳತ್ತ ಆನೆಗಳು ಬಾರದಂತೆ ಆನೇಕಲ್ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಸದ್ದು ಮಾಡುತ್ತಿದ್ದಾರೆ. ಅಲ್ಲದೆ, ಆನೆಗಳನ್ನು ಓಡಿಸಲು ಜನರು ಕೈ ಜೋಡಿಸಿದ್ದಾರೆ.