ಆನೇಕಲ್(ಬೆಂಗಳೂರು) :ಕಳೆದ ಮೂರು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯ ಕಲ್ಲುಕ್ವಾರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಉಳಿದಿಬ್ಬರು ಬಾಲಾಪರಾಧಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಯುವಕನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಮೂಲದ ಸಾಗರ್(25) ಎಂದು ಗುರುತಿಸಲಾಗಿದೆ. ಮೃತ ಯುವಕ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೂಲದ ರೂಪಾ ಎಂಬಾಕೆಯನ್ನು ಆಗಾಗ್ಗೆ ಲೈಂಗಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದನಂತೆ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಕೊಲೆಯಾದ ಸಾಗರ್, ಬೊಮ್ಮಸಂದ್ರ ಕೈಗಾರಿಕಾ ವಲಯದ ಕಂಪನಿಯಲ್ಲಿ ಕಾರ್ಮಿಕನಾಗಿದ್ದು, ಹೆಬ್ಬಗೋಡಿಯಲ್ಲಿ ವಾಸವಿದ್ದ. ಆತನ ಮನೆ ಪಕ್ಕದಲ್ಲಿಯೇ ರೂಪಾ ಕುಟುಂಬ ವಾಸವಾಗಿತ್ತು. ಮಹಿಳೆ ಹೆಬ್ಬಗೋಡಿಯ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು, ಆಕೆಯ ಪತಿ ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅಲ್ಲದೆ ರೂಪಾ ಆಸ್ಪತ್ರೆ ಖರ್ಚಿಗಾಗಿ ಸಾಗರ್ನಿಂದ 20 ಸಾವಿರ ರೂ.ಗಳನ್ನು ಪಡೆದಿದ್ದಳಂತೆ.
ಇದನ್ನೇ ನೆಪ ಮಾಡಿಕೊಂಡು ಸಾಗರ್, ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇತ್ತ ಪತಿ ಮಾನಸಿಕ ರೋಗದಿಂದ ಬಳಲುತ್ತಿದ್ದರಿಂದ ರೂಪಾ ನಿರಾಕರಿಸದೆ ಅನಿವಾರ್ಯವಾಗಿ ಒಪ್ಪಿದ್ದಳು. ನಮ್ಮಿಬ್ಬರ ರಾಸಲೀಲೆ ವಿಡಿಯೋ ಇದೆ.
ಕರೆದಾಗ ಬರುವಂತೆ ಸಾಗರ್ ಪದೇಪದೆ ಮಹಿಳೆಯನ್ನು ಪೀಡಿಸುತ್ತಿದ್ದನಂತೆ. ಇದರಿಂದ ಮನನೊಂದ ರೂಪಾ, ತನ್ನ ಮಗನ ಸ್ನೇಹಿತ ಚಿತ್ರದುರ್ಗ ಮೂಲದ ಟಾಟಾ ಏಸ್ ಚಾಲಕ ತಿಮ್ಮೇಶ್ನಿಗೆ ವಿಷಯ ತಿಳಿಸಿದ್ದಳು.