ಕರ್ನಾಟಕ

karnataka

ETV Bharat / state

ರಿಟರ್ನಿಂಗ್ ಆಫೀಸರ್ ಇಲ್ಲದೆಯೇ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ: ಗ್ರಾಮಸ್ಥರ ಆರೋಪ

ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಬರಗೇನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿದ್ದು, ಈ ವೇಳೆ ರಿಟರ್ನಿಂಗ್ ಆಫೀಸರ್ ಇರಲಿಲ್ಲ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.

ರಿಟರ್ನಿಂಗ್ ಆಫೀಸರ್ ಇಲ್ಲದೆ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ; ಗ್ರಾಮಸ್ಥರಿಂದ ಆರೋಪ

By

Published : Sep 3, 2019, 8:48 PM IST

ನೆಲಮಂಗಲ:ರಿಟರ್ನಿಂಗ್ ಆಫೀಸರ್ ಇಲ್ಲದೆಯೇಬರಗೇನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಿಟರ್ನಿಂಗ್ ಆಫೀಸರ್ ಇಲ್ಲದೆ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ: ಗ್ರಾಮಸ್ಥರಿಂದ ಆರೋಪ

ತಾಲೂಕಿನ ಸೋಂಪುರ ಹೋಬಳಿಯ ಬರಗೇನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘವು ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಸಂಘದ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರನ್ನು ಚುನಾಯಿಸಲು ಇದೇ ತಿಂಗಳ 8 ರಂದು ಚುನಾವಣೆ ನಡೆಯಬೇಕಿತ್ತು. ಈ ಚುನಾವಣೆ ನಡೆಸಲು ರಿಟರ್ನಿಂಗ್ ಆಫೀಸರ್ ನೇಮಕವಾಗಬೇಕಿದೆ. ನಾಮಪತ್ರ ಸ್ವೀಕಾರ ಮತ್ತು ಪರಿಶೀಲನೆ ಅವರಿಂದಲೇ ನಡೆಯಬೇಕು. ಆದರೆ ಚುನಾವಣೆಗಾಗಿ ಯಾವೊಬ್ಬ ಅಧಿಕಾರಿಯೂ ಸಂಘದ ಕಚೇರಿಗೆ ಆಗಮಿಸಿಲ್ಲ. ಚುನಾವಣೆ ನಡೆಯದೆ ನೋಟಿಸ್ ಬೋರ್ಡ್‍ನಲ್ಲಿ ಈ ಹಿಂದಿನಿಂದ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿ, ತಮಗಿಷ್ಟ ಬಂದವರ 35 ಜನ ಸದಸ್ಯರ ಪಟ್ಟಿಯನ್ನು ಏಕಾಏಕಿ ಪ್ರಕಟಿಸಿದೆ ಎಂದು ಬರಗೇನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯರು ದೂರುತ್ತಿದ್ದಾರೆ.

ಬರಗೇನಹಳ್ಳಿ ಸೇವಾ ಸಹಕಾರ ಸಂಘವು ಕಳೆದ 25ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಸುತ್ತಮುತ್ತಲ ರೈತರಿಗೆ ಯಾವುದೊಂದು ಸೌಕರ್ಯವನ್ನು ಕಲ್ಪಿಸುತ್ತಿಲ್ಲ. ಹಿಂದಿನಿಂದಲೂ ಆಡಳಿತ ಮಂಡಳಿ ತಮಗಿಷ್ಟ ಬಂದವರನ್ನು ಮಾತ್ರ ಗುರುತಿಸಿ ಅವರದ್ದೇ ಆದ ಸಮೂಹವನ್ನು ಸೃಷ್ಟಿಸಿಕೊಂಡು ರೈತರಿಗೆಲ್ಲ ಅನ್ಯಾಯ ಮಾಡುತ್ತಿದ್ದಾರೆ. ಸಹಕಾರ ಸಂಘದಲ್ಲಿ 1820 ಜನ ಸದಸ್ಯರಿದ್ದು, ಮತದಾನದ ಅವಕಾಶವನ್ನು ಕೇವಲ 261 ಜನಗಳಿಗೆ ಮಾತ್ರ ನೀಡಲಾಗಿದೆ. ಸಂಘದಲ್ಲಿ ಕೆಲವೊಂದು ನಿಯಮಗಳಿದ್ದರೂ ಅವುಗಳನ್ನು ಯಾರು ಪಾಲಿಸುತ್ತಿಲ್ಲ ಎಂದಿದ್ದಾರೆ.

ಅಲ್ಲದೇ ,ಸದಸ್ಯರಿಗೂ ತಿಳಿಸದೇ ಇಲ್ಲಿನ ಆಡಳಿತ ಮಂಡಳಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಚುನಾವಣಾಧಿಕಾರಿಯ ಸಹಿ ಇಲ್ಲದೇ ನೋಟಿಸ್‍ ಬೋರ್ಡ್ ನಲ್ಲಿ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಹಾಕಿದ್ದಾರೆ. ಎಷ್ಟು ಜನ ಚುನಾವಣೆಗೆ ಅರ್ಜಿ ಹಾಕಿದ್ದರು, ಯಾರ ಅರ್ಜಿಗಳು ತಿರಸ್ಕೃತವಾಗಿವೆ ಎಂಬುದರ ಮಾಹಿತಿಯೇ ಇಲ್ಲದೇ ಆಡಳಿತ ಮಂಡಳಿಯ ಸಿಇಒ ರೂಪಾ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಸದಸ್ಯರು ಕಿಡಿಕಾರಿದ್ದಾರೆ. ಈ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದು, ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಹರಿಸಿ ಚುನಾವಣೆಯನ್ನು ಮುಂದೂಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.





ABOUT THE AUTHOR

...view details