ಕರ್ನಾಟಕ

karnataka

ETV Bharat / state

ಒಂದೇ ಗ್ರಾಪಂನಲ್ಲಿ ಇಬ್ಬರು ದಂಪತಿಗಳಿಗೆ ಗೆಲುವಿನ ಸಿಂಚನ: ಇಂಜಿನಿಯರ್​ ಕೆಲಸಕ್ಕೆ ಗುಡ್​ ಬೈ - ಮಹದೇವಪುರ ಒಂದೇ ಗ್ರಾ ಪಂ ಇಬ್ಬರು ದಂಪತಿಗಳು ಆಯ್ಕೆ

ಆವಲಹಳ್ಳಿ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಇಬ್ಬರು ದಂಪತಿ ಜೋಡಿ ಆಯ್ಕೆಯಾಗಿದೆ. ಕಿಶೋರ್ ಮತ್ತು ರೇವತಿ ಹಾಗೂ ದೇವರಾಜ್ ಮತ್ತು ಜ್ಯೋತಿ ದಂಪತಿಗಳು ಜಯಗಳಿಸಿದ್ದಾರೆ.

Elected a two couples in Gp election in Mhadevapur
ಒಂದೇ ಗ್ರಾ ಪಂ ಇಬ್ಬರು ದಂಪತಿಗಳು ಆಯ್ಕೆ

By

Published : Jan 1, 2021, 7:19 AM IST

ಮಹದೇವಪುರ: ಈ ಬಾರಿಯ ಗ್ರಾ ಪಂ ಚುನಾವಣೆ ಅನೇಕೆ ವಿಸ್ಮಯಗಳಿಗೆ ಕಾರಣವಾಗಿದೆ. ಆವಲಹಳ್ಳಿ ಪಂಚಾಯಿತಿ ಒಂದರಲ್ಲೇ ಇಬ್ಬರು ದಂಪತಿಗಳಿಗೆ ಗೆಲುವು ದೊರಕಿದೆ.

ಆವಲಹಳ್ಳಿ ಪಂಚಾಯಿತಿಯಲ್ಲಿ ಕಿಶೋರ್ ಮತ್ತು ರೇವತಿ ದಂಪತಿಗಳು ಮತ್ತು ದೇವರಾಜ್ ಮತ್ತು ಜ್ಯೋತಿ ದಂಪತಿಗಳು ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರಾಗಿ ಸ್ಪರ್ಧೆ ಮಾಡಿದ ಕಿಶೋರ್ ಮತ್ತು ರೇವತಿ ದಂಪತಿಗಳು ಆವಲಹಳ್ಳಿ ಗ್ರಾಮದ ಮೊದಲನೇ ವಾರ್ಡ್ ಮತ್ತು ಪತ್ನಿ ರೇವತಿ ಐದನೇ ವಾರ್ಡಿನಿಂದ ಗೆಲುವು ಸಾಧಿಸಿದ್ದಾರೆ.

ದೇವರಾಜ್ ಮತ್ತು ಜ್ಯೋತಿ ದಂಪತಿಗಳು ಕಳೆದ ಅವದಿಯಲ್ಲಿ ಜ್ಯೋತಿ ಅವರು ಆವಲಹಳ್ಳಿ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಆದರೆ, ಈ ಸಲ ಯಾವುದೇ ರಾಜಕೀಯ ಪಕ್ಷಗಳ ಬೆಂಬಲಿತವಾಗಿ ನಿಲ್ಲದೇ ಸ್ವತಂತ್ರ ಅಭ್ಯರ್ಥಿಗಳಾಗಿ ಆರನೇ ವಾರ್ಡಿನಲ್ಲಿ ಸ್ಪರ್ಧೆ ಮಾಡಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿದ್ದಾರೆ. ಕಳೆದ ಅವಧಿಯಲ್ಲಿ ನಾವು ಮಾಡಿದ ಅತ್ಯುತ್ತಮ ಕೆಲಸವನ್ನು ನೋಡಿ ಜನ ನಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ದೇವರಾಜ್ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಜನರ ಸೇವೆ ಮಾಡಲು ಕೇಂದ್ರ ಸರ್ಕಾರದ ಎಚ್ ಎ ಎಲ್ ನ ಇಂಜಿನ್ ಮೆಕಾನಿಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ನಂತರ ಮಾತನಾಡಿದ ಕಿಶೋರ್ ಕುಮಾರ್, ಅರವಿಂದ ಲಿಂಬಾವಳಿ ಶಾಸಕರ ಅನುದಾನದಲ್ಲಿ ಆವಲಹಳ್ಳಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡ ಹಿನ್ನೆಲೆ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಕೈ ಹಿಡಿದಿದ್ದಾರೆ ಎಂದು ತಿಳಿಸಿದರು.

ಓದಿ : ಮುರಕಟ್ಟಿ - ಮಲ್ಲೂರಿನಲ್ಲಿ ಅಣ್ಣಾ - ತಂಗಿ ಗೆಲುವು; ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾದ ಫಲಿತಾಂಶ

ABOUT THE AUTHOR

...view details