ದೊಡ್ಡಬಳ್ಳಾಪುರ:ತಾಲೂಕಿನಲ್ಲಿ ದೇವರಿಗೆ ಬಿಟ್ಟಿದ್ದ ಮೇಕೆಯೊಂದು ಬಾಲಕಿಗೆ ಗುದ್ದಿದೆ. ಈ ಬಗ್ಗೆ ಮಾಲೀಕನನ್ನು ಪ್ರಶ್ನಿಸಿದ್ದಕ್ಕೆ ಆಕೆಯ ಅಜ್ಜನ ಮೇಲೆ ಹಲ್ಲೆ ನಡೆದಿದೆ. ಪರಿಣಾಮ ವೃದ್ದ ಎದೆನೋವಿನಿಂದ ಮೃತಪಟ್ಟಿದ್ದಾರೆ.
ತಾಲೂಕಿನ ಬಿಸುವನಹಳ್ಳಿಯಲ್ಲಿ ಘಟನೆ ನಡೆದಿದೆ. ಚಂದ್ರಶೇಖರ್ (65 ವರ್ಷ) ಮೃತಪಟ್ಟಿದ್ದಾರೆ. ಇದೇ ಗ್ರಾಮದ ರವಿಕುಮಾರ್ ದೇವರಿಗೆ ಮೇಕೆಯೊಂದನ್ನು ಬಿಟ್ಟಿದ್ದರು. ಈ ಮೇಕೆ ಮೃತರಾದ ಚಂದ್ರಶೇಖರ್ ಮೊಮ್ಮಗಳಿಗೆ ಗುದ್ದಿದೆ. ಹೀಗಾಗಿ ಮೇಕೆಯನ್ನು ಕಟ್ಟಿ ಹಾಕುವಂತೆ ರವಿಕುಮಾರ್ ಅವರು ಮಾಲೀಕ ಚಂದ್ರಶೇಖರ್ಗೆ ಹೇಳಿದ್ದಾರೆ.