ಕರ್ನಾಟಕ

karnataka

ETV Bharat / state

ದಲಿತರ ಕೇರಿಯಿಂದ ಬರುವ ನೀರಿಗೆ ತಡೆ: ಮನೆಗಳಿಗೆ ನುಗ್ಗಿದ ನೀರು, ದವಸ ಧಾನ್ಯ ನಾಶ - ಭಾರೀ ಮಳೆಗೆ ಮನೆಗೆ ನುಗ್ಗಿದ ಚರಂಡಿ ನೀರು

ದೊಡ್ಡಬಳ್ಳಾಪುರ ತಾಲೂಕಿನ ಗುಂಡಂಗೆರೆ ಗ್ರಾಮದಲ್ಲಿನ ತಗ್ಗು ಪ್ರದೇಶನದಲ್ಲಿನ ಮನೆಗಳಿಗೆ ನೀರು ನುಗ್ಗಿ ಚಿಲ್ಲರೆ ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳು ನೀರು ಪಾಲಾಗಿವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದು ಮನೆಯಲ್ಲಿ ಇಟ್ಟಿದ್ದ ರಾಗಿ ಮೂಟೆಗಳು ಸಹ ನೀರು ಪಾಲಾಗಿವೆ. ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದು ಗ್ರಾಮದಲ್ಲಿನ ಚರಂಡಿ ವ್ಯವಸ್ಥೆ.

Dumped sewage water in daliths home  due to  heavy rain in doddaballapura
Dumped sewage water in daliths home due to heavy rain in doddaballapura

By

Published : May 20, 2022, 9:30 PM IST

Updated : May 20, 2022, 9:52 PM IST

ದೊಡ್ಡಬಳ್ಳಾಪುರ: ಭಾರಿ ಮಳೆಯ ಅನಾಹುತದಲ್ಲಿಯೂ ಜಾತೀಯತೆಯ ಕ್ರೌರ್ಯ ತಾಂಡವವಾಡಿದೆ. ದಲಿತರ ಕೇರಿಯಿಂದ ಬರುವ ಚರಂಡಿ ನೀರು ನಮ್ಮ ಏರಿಯಾ ಮೂಲಕ ಹಾದು ಹೋಗಬಾರದು ಅನ್ನುವ ಕಾರಣಕ್ಕೆ ಚರಂಡಿಗೆ ತಡೆಗೋಡೆ ಹಾಕಿದ್ದು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಮನೆಗಳಿಗೆ ನುಗ್ಗಿದೆ. ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯ ನೀರು ಪಾಲಾಗಿದೆ.

ದಲಿತರ ಕೇರಿಯಿಂದ ಬರುವ ನೀರಿಗೆ ತಡೆ: ಮನೆಗಳಿಗೆ ನುಗ್ಗಿದ ನೀರು, ದವಸ ಧಾನ್ಯ ನಾಶ

ದೊಡ್ಡಬಳ್ಳಾಪುರ ತಾಲೂಕಿನ ಗುಂಡಂಗೆರೆ ಗ್ರಾಮದಲ್ಲಿನ ತಗ್ಗು ಪ್ರದೇಶನದಲ್ಲಿನ ಮನೆಗಳಿಗೆ ನೀರು ನುಗ್ಗಿ ಚಿಲ್ಲರೆ ಅಂಗಡಿಯಲ್ಲಿದ್ದ ದಿನಸಿ ಸಾಮಾನುಗಳು ನೀರು ಪಾಲಾಗಿವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದು ಮನೆಯಲ್ಲಿ ಇಟ್ಟಿದ್ದ ರಾಗಿ ಮೂಟೆಗಳು ಸಹ ನೀರು ಪಾಲಾಗಿವೆ. ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದು ಗ್ರಾಮದಲ್ಲಿನ ಚರಂಡಿ ವ್ಯವಸ್ಥೆ.

ದಲಿತರ ಕೇರಿಯಿಂದ ಹರಿದು ಬರುವ ಚರಂಡಿ ನೀರು ಗ್ರಾಮದ ಮೂಲಕ ಹಾದು ಹೋಗುತ್ತೆ. ಆದರೆ, ಗ್ರಾಮದಲ್ಲಿನ ಕೆಲವು ವ್ಯಕ್ತಿಗಳು ದಲಿತರ ಕೇರಿಯಿಂದ ಬರುವ ಚರಂಡಿ ನೀರು ನಮ್ಮ ಮನೆಗಳ ಮೂಲಕ ಹಾದು ಹೋಗಬಾರದೆಂದು ಚರಂಡಿಗೆ ತಡೆಯನ್ನೇ ನಿರ್ಮಿಸಿದ್ದು, ಈ ಬಗ್ಗೆ ಕೇಳಿದರೆ ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸ್ವಚ್ಛ ಭಾರತ್ ಹೆಸರಿನಲ್ಲಿ ಗ್ರಾಮ ಪಂಚಾಯತ್​​ಗಳಿಗೆ ಕೋಟಿ ಕೋಟಿ ಹಣ ಬರುತ್ತಿದೆ. ಆದರೆ, ಅದರ ಸದ್ಬಳಕೆ ಮಾತ್ರ ಆಗುತ್ತಿಲ್ಲ.

ಇದನ್ನೂ ಓದಿ :ನೆಲಸಮಗೊಳಿಸಲಾಗಿದ್ದ ಹುಚ್ಚಗಣಿ ದೇವಾಲಯ ಮರು ನಿರ್ಮಾಣಕ್ಕೆ ಶಂಕುಸ್ಥಾಪನೆ

Last Updated : May 20, 2022, 9:52 PM IST

ABOUT THE AUTHOR

...view details