ಕರ್ನಾಟಕ

karnataka

ETV Bharat / state

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಲಾರಿ ಚಾಲನೆ: ಪೊಲೀಸಪ್ಪ ಮಾಡಿದ್ದೇನು ನೋಡಿ! - ಪೆಟ್ರೋಲ್ ಟ್ಯಾಂಕರ್

ಕುಡಿದು ಅಡ್ಡಾದಿಡ್ಡಿ ಲಾರಿ ಚಲಾಯಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಲಾರಿ ಚಾಲಕನಿಗೆ ಪೊಲೀಸರು ಗೂಸಾ ನಿಡಿದ್ದಾರೆ.

ಕುಡಿದು ಅಡ್ಡಾದಿಡ್ಡಿ ಲಾರಿ ಚಲಾಯಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಲಾರಿ ಚಾಲಕನಿಗೆ ಪೊಲೀಸರು ಗೂಸಾ ನಿಡಿದ್ದಾರೆ.

By

Published : Mar 23, 2019, 10:37 AM IST

ಬೆಂಗಳೂರು: ಸೂಲಿಬೆಲೆ ರಸ್ತೆ ಕಡೆಯಿಂದ ಕುಡಿದು ಅಡ್ಡಾದಿಡ್ಡಿ ಲಾರಿ ಚಲಾಯಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕನಿಗೆ ಎಎಸ್​ಐವೊಬ್ಬರು ಗೂಸಾ ನೀಡಿದ್ದಾರೆ.

ಕುಡಿದು ಅಡ್ಡಾದಿಡ್ಡಿ ಲಾರಿ ಚಲಾಯಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಲಾರಿ ಚಾಲಕನಿಗೆ ಪೊಲೀಸರು ಗೂಸಾ ನಿಡಿದ್ದಾರೆ.

ಪೊಲೀಸರು ವಾಹನವನ್ನು ನಿಲ್ಲಿಸಲು ಮುಂದಾದರೂ ಲಾರಿಯನ್ನು ನಿಲ್ಲಿಸದೆ ಚಾಲಕ ಹೊಗುತ್ತಿದ್ದ ಎನ್ನಲಾಗಿದೆ. ಆಗ ಲಾರಿ ಹಿಂಬಾಲಿಸಿ ಹಿಡಿದ ಎಎಸ್​​ಐ, ಚಾಲಕನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ ನಡೆದಿದೆ ಎನ್ನಲಾಗಿದೆ.

ಬೀಟ್​​​ನಲ್ಲಿ ಕೆಲಸ ಮಾಡುವ ವೇಳೆ ಟ್ಯಾಂಕರ್ ಚಾಲಕ ಮದ್ಯಪಾನ ಮಾಡಿ ಲಾರಿ ನಿಲ್ಲಿಸಿಲ್ಲವೆಂಬ ಕಾರಣಕ್ಕೆ ಹಿಂಬಾಲಿಸಿಕೊಂಡು ಬಂದು ಚಾಲಕ ಕೆಳಗಿಳಿಯುತ್ತಿದ್ದಂತೆ ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ ಎನ್ನಲಾಗಿದೆ.

ರಸ್ತೆಯಲ್ಲಿ ಸಂಚರಿಸುವವರು ಈ ಘಟನೆಯನ್ನು ಕಂಡು ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದರಿಂದ ವಿಡಿಯೋ ವೈರಲ್​​​​​ ಆಗಿದ್ದು, ಈಗ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 90 ಸಾವಿರ ಜನ ಈ ವಿಡಿಯೋವನ್ನ ನೋಡಿ, ಪೊಲೀಸಪ್ಪನ ಹಾಗೂ ಲಾರಿ‌‌ ಚಾಲಕ ಇಬ್ಬರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಪ್ರತಿಕ್ರಿಯೆ ನಿಡಿದ್ದಾರೆ.

ABOUT THE AUTHOR

...view details