ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣ ಮೂಲಕ ಸುಮಾರು 20 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ ಕೋಕೆನ್ ಕ್ಯಾಪ್ಸುಲ್ ಸಾಗಿಸುತ್ತಿದ್ದ ನೈಜಿರಿಯಾ ಮೂಲದ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬೆಂಗಳೂರು ಘಟಕದ (Directorate of Revenue Intelligence) ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು: ವ್ಯಕ್ತಿಯ ಹೊಟ್ಟೆಯಲ್ಲಿತ್ತು 99 ಕೊಕೇನ್ ಕ್ಯಾಪ್ಸುಲ್! - ಕೊಕೇನ್ ಕಳ್ಳಸಾಗಣೆ
Cocaine smuggling: ಬೆಂಗಳೂರು ಡಿಆರ್‌ಐ ಅಧಿಕಾರಿಗಳು ಅತಿದೊಡ್ಡ ಕೊಕೇನ್ ಕಳ್ಳಸಾಗಣೆ ಭೇದಿಸಿದ್ದು, ಕಳ್ಳಸಾಗಾಣಿಕೆದಾರನ ಹೊಟ್ಟೆಯಲ್ಲಿದ್ದ 99 ಕೊಕೇನ್ ಕ್ಯಾಪ್ಸುಲ್ ವಶಕ್ಕೆ ಪಡೆದಿದ್ದಾರೆ.
Published : Dec 20, 2023, 9:29 PM IST
ಫ್ಲೈ ಇಥಿಯೋಪಿಯಾ ವಿಮಾನದಲ್ಲಿ ಕೋಕೆನ್ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಗುಪ್ತಚರ ಅಧಿಕಾರಿಗಳು ನೈಜಿರಿಯಾ ಪ್ರಜೆಯನ್ನು ತಪಾಸಣೆ ನಡೆಸಿದ್ದಾರೆ. ಸುಮಾರು 40 ವರ್ಷ ವಯಸ್ಸಿನ ಆರೋಪಿಯು ತನ್ನ ಹೊಟ್ಟೆಯೊಳಗೆ 2 ಕೆ.ಜಿ ತೂಕದ 99 ಕೊಕೇನ್ ಕ್ಯಾಪ್ಸುಲ್ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ. ಈತ ನೈಜೀರಿಯನ್ ಪಾಸ್‌ಪೋರ್ಟ್ ಹೊಂದಿದ್ದು, ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 775 ಗ್ರಾಂ ಚಿನ್ನ ವಶಕ್ಕೆ