ಕರ್ನಾಟಕ

karnataka

ETV Bharat / state

ಕಲೆಗಾಗಿ ಜೀವ ಮುಡಿಪಿಟ್ಟ ಕೆ. ನಾಗರತ್ನಮ್ಮ: ಈಟಿವಿ ಭಾರತ ಜೊತೆ ವಿಶೇಷ ಸಂದರ್ಶನ - Drama artist D. nagarathnamma story

ಹಿಂದೆ ಹೆಣ್ಣು ಎಂದರೆ, ಮನೆಯಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಎತ್ತಿಕೊಂಡು ಮನೆಗೆ ಮಾತ್ರ ಸೀಮಿತವಾಗಿರಬೇಕು ಎಂಬ ಕಲ್ಪನೆಯಲ್ಲಿದ್ದವರೇ ಹೆಚ್ಚು. ಆದರೆ, ಅಂದಿನ ಕಾಲ ಘಟ್ಟದಲ್ಲಿ ಇದೆಲ್ಲವನ್ನು ಬದಿಗಿಟ್ಟು ರಂಗ ಭೂಮಿಯಲ್ಲಿ ಸೈ ಎನ್ನಿಸಿಕೊಂಡವರು ಡಾ. ಕೆ. ನಾಗರತ್ನಮ್ಮ. ಅವರೊಂದಿಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಿಶೇಷ ಸಂದರ್ಶನ ನಡೆಸಿದ್ದಾರೆ.

ಡಾ.ಕೆ.ನಾಗರತ್ನಮ್ಮ

By

Published : Oct 13, 2019, 3:13 PM IST

Updated : Oct 13, 2019, 3:30 PM IST

ಹೊಸಪೇಟೆ:ಕಲೆಯನ್ನು ಕರಗತ ಮಾಡಿಕೊಂಡು ಕರ್ನಾಟಕ ಜನರ ಮನಸ್ಸನ್ನು ಗೆದ್ದಿರುವ ಬಡ ಕಲಾವಿದೆ ಡಾ. ಕೆ. ನಾಗರತ್ನಮ್ಮ ರಂಗ ಭೂಮಿಯಲ್ಲಿ ಅಪಾರವಾದ ಸಾಧನೆ ಮಾಡಿದ್ದಾರೆ.

ಡಾ. ಕೆ. ನಾಗರತ್ನಮ್ಮ 1952 ರಲ್ಲಿ ಜನಿಸಿದವರು. ತಂದೆ ಮಾರೆಪ್ಪ, ತಾಯಿ ಸಿದ್ದಮ್ಮ. ಇವರದ್ದು ಅವಿಭಕ್ತ ಕುಟುಂಬವಾಗಿದ್ದು, ಬಡತನದಲ್ಲೇ ಸಂಸಾರ ನಡೆಸುವುದು ತುಂಬಾ ಕಷ್ಟ ಎಂಬುದನ್ನು ಅರಿತಿದ್ದ ನಾಗರತ್ನಮ್ಮ ಅವರು ತಂದೆಗೆ ಸಹಾಯ ಮಾಡಬೇಕೆಂದು 1967ರಲ್ಲಿ ರಂಗ ಭೂಮಿ ಪ್ರವೇಶಿಸಿದ್ದರು. ಬಳಿಕ ಅವರು ಸುಮಾರು 10 ಸಾವಿರಕ್ಕೂ ‌ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಪ್ರಮುಖ ನಾಟಕಗಳು:
ರಕ್ತ ರಾತ್ರಿ, ಹೇಮರೆಡ್ಡಿ ಮಲ್ಲಮ್ಮ, ಕುರುಕ್ಷೇತ್ರ, ಸತ್ಯ ಹರಿಶ್ಚಂದ್ರ, ಅಣ್ಣ ತಂಗಿ, ಆದರ್ಶ ಪ್ರೇಮ, ಗಂಡನ ಆಜ್ಞೆ, ಮಲಮಗಳು, ಸ್ತ್ರೀ ರತ್ನ, ದೇವ ಮಾನವ, ರತ್ನ ಮಾಂಗಲ್ಯ, ಬಸ್ಸ ಹಮಾಲ ,ಬೆಳ್ಳಕ್ಕಿ ಹಿಂಡು ಬೆದರಾವು, ಜೋಕುಮಾರ ಸ್ವಾಮಿ ಇನ್ನೂ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ರಂಗ ಭೂಮಿಗೆ ಕಾಲಿಟ್ಟರು ಡಾ. ಕೆ.ನಾಗರತ್ನಮ್ಮ

ಕಲಾ ಸೇವೆ:
1966 ರಲ್ಲಿ ಲಲಿತಕಲಾ ರಂಗದ ಸದಸ್ಯೆಯಾಗಿದ್ದರು.1998 ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಸೇವೆ ಹಾಗೂ ಕಲೆಯನ್ನು ಗುರುತಿಸಿ ವರನಟ ಡಾ.ರಾಜಕುಮಾರ್ ಹಾಗೂ ಮಾಜಿ‌ ಮುಖ್ಯಮಂತ್ರಿ ಜೆ. ಹೆಚ್​.​​ ಪಟೇಲ್ ಅವರು ಸನ್ಮಾನಿಸಿದ್ದರು.

ರಾಜಕೀಯ ಪ್ರವೇಶ:
ನಾಟಕದ ಜೊತೆ ಜೊತೆಗೆ ರಾಜಕೀಯ ಬಾಗಿಲನ್ನು1976 ರಲ್ಲಿ ಪ್ರವೇಶಿಸಿದ್ದರು. ಆಗ ಮರೆಯಮ್ಮನಹಳ್ಳಿಯ ಗ್ರಾಮ ಪಂಚಾಯತ್​ ಸದಸ್ಯರಾಗಿ ಆಯ್ಕೆಯಾಗಿ, 1995 ರಿಂದ 2000ದ ವರೆಗೂ ಹೊಸಪೇಟೆ ತಾಲೂಕು ಪಂಚಾಯತ್​ ಸದಸ್ಯರು ಹಾಗೂ ತಾಲೂಕು ಪಂಚಾಯತ್​ ಉಪಾಧ್ಯಕ್ಷರಾಗಿ ರಾಜಕೀಯದಲ್ಲಿ ಜನರ ಮೆಚ್ಚುಗೆಯನ್ನು ಪಡೆದಿದ್ದರು. ಆದರೆ, ರಂಗ ಭೂಮಿಯನ್ನು ಮಾತ್ರ ಅವರು ಮರೆತಿಲ್ಲ.

ಪ್ರಶಸ್ತಿಗಳು:
1994 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 1999ರಲ್ಲಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ, 2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಒಲಿದು ಬಂದಿದೆ. 2013 ರಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2016 ರಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಸಹ ಲಭಿಸಿರುವುದು ಇವರ ಕಲಾ ಸೇವೆಗೆ ಹಿಡಿದ ಕೈಗನ್ನಡಿಯಂತಿದೆ.

Last Updated : Oct 13, 2019, 3:30 PM IST

ABOUT THE AUTHOR

...view details