ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದ ದಂಪತಿ.. ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದ ಸಚಿವ ಸುಧಾಕರ್ - Tipper lorry collides with bike when road is paved for minister's vehicle traffic

ಸಚಿವರ ವಾಹನ ಸಂಚಾರಕ್ಕೆ ರಸ್ತೆ ಸುಗಮಗೊಳಿಸುವ ವೇಳೆ ಟಿಪ್ಪರ್ ಲಾರಿ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಬೈಕ್​ನಲ್ಲಿದ್ದ ದಂಪತಿಗೆ ಗಂಭೀರ ಗಾಯವಾಗಿದ್ದು, ಆರೋಗ್ಯ ಸಚಿವರೇ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ ಡಾ.ಸುಧಾಕರ್
ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ ಡಾ.ಸುಧಾಕರ್

By

Published : Feb 27, 2022, 7:12 PM IST

ದೇವನಹಳ್ಳಿ:ಆರೋಗ್ಯ ಸಚಿವ ಸುಧಾಕರ್​​ ಅವರು ಜಿಲ್ಲಾ ಪಲ್ಸ್ ಪೋಲಿಯೋ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಾಗ ಬೆಂಗಳೂರು-ಹೈದರಾಬಾದ್ ರಸ್ತೆಯ ದೇವನಹಳ್ಳಿಯ ಬೈಪಾಸ್ ಬಳಿ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ದಂಪತಿಯನ್ನು ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ ಡಾ.ಸುಧಾಕರ್

ಸಚಿವರ ವಾಹನ ಸಂಚಾರಕ್ಕೆ ರಸ್ತೆ ಸುಗಮಗೊಳಿಸುವ ವೇಳೆ ಟಿಪ್ಪರ್ ಲಾರಿ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಂಧ್ರದ ಕದಿರಿಯ ದಂಪತಿ ರಾಮಚಂದ್ರಪ್ಪ ಮತ್ತು ಶಂಕರಮ್ಮ ಇಬ್ಬರ ಕಾಲುಗಳು‌ ನಜ್ಜುಗುಜ್ಜಾಗಿವೆ.

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ ಡಾ.ಸುಧಾಕರ್

ಮಧ್ಯಾಹ್ನ ಅಪಘಾತವಾದ ಕೂಡಲೇ ಜನರ ನೂಕುನುಗ್ಗಲು ಮತ್ತು ಗಲಾಟೆ ಕಂಡು ಆರೋಗ್ಯ ಸಚಿವರೇ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಿದ್ದಾರೆ.

ಇದನ್ನೂ ಓದಿ:ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ಪ್ರಥಮ್

ಇಬ್ಬರು ಬೈಕ್ ಸವಾರರ ಕಾಲುಗಳಿಗೆ ತೀವ್ರ ಗಾಯವಾಗಿದ್ದು, ತಕ್ಷಣ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಸೂಚನೆಯನ್ನು ನೀಡುವ ಮೂಲಕ ಆರೋಗ್ಯ ಸಚಿವ ಸುಧಾಕರ್ ಮಾನವೀಯತೆ ಮೆರೆದಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

For All Latest Updates

TAGGED:

ABOUT THE AUTHOR

...view details