ಹೊಸಕೋಟೆ: ನಿರ್ದೇಶಕ, ಹಾಸ್ಯ ನಟ ಸಾಧುಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ. ಸಿ ಅಶ್ವಥ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಭಾವರೂಪಕ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಖ್ಯಾತ ಗಾಯಕ ದಿವಂಗತ ಡಾ. ಸಿ.ಅಶ್ವತ್ಥ್ ಪ್ರಶಸ್ತಿ ಪ್ರದಾನ ಹಾಗೂ 80ನೇ ಜನ್ಮದಿನದ ನೆನಪಿಗಾಗಿ ಕನ್ನಡವೇ ಸತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಚಲನಚಿತ್ರ ನಿರ್ದೇಶಕ, ಹಾಸ್ಯ ನಟ, ಸಾಧು ಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ.ಸಿ ಅಶ್ವಥ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಿ. ಡಾ. ಸಿ. ಅಶ್ವಥ್ ಪ್ರಶಸ್ತಿ ಪ್ರದಾನ ಹಾಗೂ 80ನೇ ಜನ್ಮದಿನದ ನೆನಪಿಗಾಗಿ ಕನ್ನಡವೇ ಸತ್ಯ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಸಾಧುಕೋಕಿಲ, ವೇಣುಗೋಪಾಲ್ ಸೇರಿದಂತೆ ಗಾಯಕರಾದ ರಮೇಶ್ ಚಂದ್ರ, ಪಂಚಮ ಹಳಿಬಂಡಿ, ಜೋಗಿ ಸುನಿತಾ, ಕಲಾವತಿ ದಯಾನಂದ್, ಯುವ ಗಾಯಕಿ ಮಾನಸ ಸೇರಿದಂತೆ ಮತ್ತಿತರ ಗಾಯಕರು ಡಾ.ಸಿ. ಆಶ್ವಥ್ ಅವರ ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಕನ್ನಡವೇ ಸತ್ಯ ರೂವಾರಿ ಹಾಗೂ ಅಧ್ಯಕ್ಷರಾದ ಕೌಡ್ಲೆ ರವೀಂದ್ರನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಚಾರ ಸಮಿತಿಯ ಅಧ್ಯಕ್ಷತೆಯನ್ನು ಡಾ. ಎಂ.ಹೆಚ್ ಸುಬ್ಬರಾಜು ವಹಿಸಿಕೊಂಡಿದ್ದರು.