10 ಸಾವಿರ ಕದ್ದ ಕಳ್ಳರನ್ನು ಹಿಡಿಯಲು ಹೋಗಿ 12 ಲಕ್ಷ ಪ್ರಕರಣ ಭೇಧಿಸಿದ ಪೊಲೀಸರು - ರೈಲ್ವೆ ಸ್ಟೇಷನ್ ಹಿಂಭಾಗ
ದೊಡ್ಡಬಳ್ಳಾಪುರ ನಗರದ ನಿವೇದಿತಾ ಶಾಲೆಯಲ್ಲಿ ಬಾಗಿಲು ಮುರಿದು 10 ಸಾವಿರ ಹಣ ದೋಚಿ ಕಳ್ಳರು ಪರಾರಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರನ್ನ ಪತ್ತೆ ಮಾಡುವಾಗ ಅನುಮಾನಸ್ಪದವಾಗಿ ವ್ಯಕ್ತಿಯೋರ್ವನನ್ನ ವಿಚಾರಣೆ ನಡೆಸಿದಾಗ 12 ಲಕ್ಷದ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ದೊಡ್ಡಬಳ್ಳಾಪುರ : ನಗರದ ನಿವೇದಿತಾ ಶಾಲೆಯಲ್ಲಿ ಬಾಗಿಲು ಮುರಿದು 10 ಸಾವಿರ ಹಣ ದೋಚಿ ಕಳ್ಳರು ಪರಾರಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರನ್ನ ಪತ್ತೆ ಮಾಡುವಾಗ ಅನುಮಾನಸ್ಪದವಾಗಿ ವ್ಯಕ್ತಿಯೋರ್ವನನ್ನ ವಿಚಾರಣೆ ನಡೆಸಿದಾಗ 12 ಲಕ್ಷದ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ದಿನಾಂಕ 8/09/19 ರಂದು ನಗರದ ರೈಲು ನಿಲ್ದಾಣದ ಹಿಂಭಾಗ ರಸ್ತೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಚೇತನ ಅಲಿಯಾಸ್ ಚೇತು, ಶಿವಕುಮಾರ್ ಅಲಿಯಾಸ್ ಕುಳ್ಳ , ಮಾರುತಿ, ಗಂಗ ಹನುಮಯ್ಯ ಅಲಿಯಾಸ್ ಗಂಗ ರನ್ನು ವಿಚಾರಣೆ ನಡೆಸಿದಾಗ ದಿನಾಂಕ 25/08/19 ರಂದು ತ್ಯಾಮಗೊಂಡ್ಲು ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣ ಬಾಯ್ಬಿಟ್ಟಿದ್ದಾರೆ.