ಕರ್ನಾಟಕ

karnataka

By

Published : Dec 8, 2021, 6:58 PM IST

ETV Bharat / state

ದೊಡ್ಡಬಳ್ಳಾಪುರ: ಬೆಳೆಗಳಿಗೆ ಮುತ್ತಿಗೆ ಹಾಕಿದ ಬಸವನ ಹುಳುಗಳು - ರೈತರು ಕಂಗಾಲು!

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೆರೆ ಸುತ್ತಮುತ್ತಲಿನ ಜಮೀನುಗಳಲ್ಲಿ ಆಫ್ರಿಕನ್​ ಬಸವನ ಹುಳು ಹಾವಳಿ ಹೆಚ್ಚಾಗಿದೆ.

African snails problem in Doddaballapura
ದೊಡ್ಡಬಳ್ಳಾಪುರ ಜಮೀನುಗಳಲ್ಲಿ ಬಸವನ ಹುಳುಗಳು

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೆರೆಯ ಬದಿಯ ಜಮೀನುಗಳಿಗೆ ಮುತ್ತಿಗೆ ಹಾಕಿರುವ ಆಫ್ರಿಕನ್​ ಬಸವನ ಹುಳು ಹೊಕೋಸು, ಟೊಮೆಟೊ, ಬದನೆ ಗಿಡದ ಪೈರು ತಿಂದು ಬೆಳೆ ಹಾಳು ಮಾಡುತ್ತಿವೆ. ಹುಳುಗಳನ್ನು ನಿಯಂತ್ರಿಸುವಲ್ಲಿ ರೈತರು ಹೈರಾಣಾಗಿದ್ದಾರೆ.

ದೊಡ್ಡಬಳ್ಳಾಪುರ ಜಮೀನುಗಳಲ್ಲಿ ಬಸವನ ಹುಳುಗಳು

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೆರೆ ಸುತ್ತಮುತ್ತಲಿನ ಜಮೀನುಗಳಲ್ಲಿ ಆಫ್ರಿಕನ್​ ಬಸವನ ಹುಳು ಹಾವಳಿ ಹೆಚ್ಚಾಗಿದೆ. ಈಗಾಗಲೇ ಫಸಲನ್ನು ಸಹ ತಿಂದು ಹಾಕುತ್ತಿವೆ. ಬಸವನ ಹುಳುಗಳ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಿದರೆ ಹುಳುಗಳನ್ನು ತಿನ್ನುವ ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತವೆ ಎಂಬ ಚಿಂತೆ ರೈತರದ್ದು.

ಆಫ್ರಿಕಾದ ಬಸವನ ಹುಳು ಒಂದು ಆಕ್ರಮಣಕಾರಿ ಪ್ರಭೇದ. ಆಫ್ರಿಕಾ ದೇಶದಿಂದ ರಫ್ತು ಮಾಡುವ ಕೆಲವೊಂದು ವಸ್ತುಗಳಲ್ಲಿ ಭಾರತಕ್ಕೆ ಬಂದಿವೆ. ಇವು ತೇವಾಂಶ ಇರುವ ಕೃಷಿ ಭೂಮಿಗೆ ಹೆಚ್ಚಿನ ಪ್ರಮಾಣದಲ್ಲಿ ಮುತ್ತಿಗೆ ಹಾಕುತ್ತವೆ. ಒಮ್ಮೆಗೆ 200ಕ್ಕೂ ಹೆಚ್ಚು ಮೊಟ್ಟೆ ಇಡುವ ಈ ಹುಳು ಕಡಿಮೆ ಅವಧಿಯಲ್ಲಿ ಸಾವಿರ ಲೆಕ್ಕದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ಕೇರಳ ರಾಜ್ಯದ ಕೊಚ್ಚಿಯಲ್ಲಿ ಬಸವನ ಹುಳುಗಳ ಹಾವಳಿ ಹೆಚ್ಚಾದಾಗ ಇವುಗಳ ನಿಯಂತ್ರಣಕ್ಕಾಗಿ ಸರ್ಕಾರವೇ ಮುಂದೆ ಬಂದಿತ್ತು. ರಾಜ್ಯದಲ್ಲೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಸರ ಪ್ರೇಮಿ ಲೋಹಿತ್ ಮನವಿ ಮಾಡಿದರು.

ಈ ಆಫ್ರಿಕನ್​​ ಬಸವನ ಹುಳು ತೇವಾಂಶ ಹೆಚ್ಚಿರುವ ಪ್ರದೇಶದಲ್ಲಿ ಹಾಗೂ ನರ್ಸರಿಗಳಲ್ಲಿ ಅತಿ ಹೆಚ್ಚು ಕಂಡು ಬರುತ್ತದೆ. ಇವುಗಳನ್ನು ವಿಷಪ್ರಾಶನದ ಮೂಲಕ ನಿಯಂತ್ರಿಸಬಹುದು ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಭಾಗದ ಕೃಷಿ ವಿಜ್ಞಾನಿ ಡಾ. ಮಂಜುನಾಥ್ ಮಾಹಿತಿ ನೀಡಿದರು.

ರೈತರು 10 ಕೆಜಿ ಬೂಸಾ, 2 ಕೆಜಿ ಬೆಲ್ಲ ಮಿಶ್ರಣ ಮಾಡಿ 100 ಮಿಲಿ ಲಾರ್ವಿನ್ ಜೊತೆ ಸೇರಿಸಿ ರಾತ್ರಿ ವೇಳೆಯಲ್ಲಿ ನೆಲಕ್ಕೆ ಚೆಲ್ಲಿದರೆ ಅದನ್ನು ಸೇವಿಸಿ ಹುಳು ಸಾಯುತ್ತವೆ ಅಥವಾ ಸ್ನೇಯ್ಲ್ ಕಿಲ್ಲರ್ ಎನ್ನುವ ಔಷಧವಿದೆ ಅದನ್ನು ಸಿಂಪಡಿಸಬಹುದು ಎಂದು ಸಲಹೆ ನೀಡಿದ್ದಾರೆ. ಆದರೆ, ಸಿಂಪಡಿಸಿದ ಎರಡು - ಮೂರು ದಿನ ಆ ಭಾಗಕ್ಕೆ ಯಾವುದೇ ಪ್ರಾಣಿಗಳನ್ನು ಮೇವು ತಿನ್ನಲು ಬಿಡಬಾರದು ಎಂದು ಅವರು ಇದೇ ವೇಳೆ ಮುನ್ನೆಚ್ಚರಿಕೆಯನ್ನೂ ನೀಡಿದರು.

ಇದನ್ನೂ ಓದಿ:ದೇವಸ್ಥಾನಕ್ಕೆ ನುಗ್ಗಿ ಹುಂಡಿ ದೋಚಿದ ಖದೀಮರು: ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

For All Latest Updates

ABOUT THE AUTHOR

...view details