ದೊಡ್ಡಬಳ್ಳಾಪುರ:ನಗರ ಪೊಲೀಸರು ಲಂಚ ತಗೋಳಲ್ಲ ಹಾಗೂ ನೀಡುವುದಿಲ್ಲ ಮತ್ತು ಎಲ್ಲಾ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇವೆ ಎಂದು ಪ್ರತಿಜ್ಞಾ ವಿಧಿ ತೆಗೆದುಕೊಂಡರು.
ದೊಡ್ಡಬಳ್ಳಾಪುರ ಪೊಲೀಸರು ಲಂಚ ಮುಟ್ಟೊದಿಲ್ಲ... ಯಾಕೆ ಗೊತ್ತಾ..? - Doddaballapur police took an oath
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಕೆ.ವೆಂಕಟೇಶ್ ನೇತೃತ್ವದಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲವೆಂದು ಪೊಲೀಸ್ ಸಿಬ್ಬಂದಿ ಠಾಣೆ ಮುಂಭಾಗದ ಧ್ವಜ ಸ್ತಂಭದ ಮುಂದೆ ಪ್ರತಿಜ್ಞೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಕೆ.ವೆಂಕಟೇಶ್ ನೇತೃತ್ವದಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲವೆಂದು ಪೊಲೀಸ್ ಸಿಬ್ಬಂದಿ ಠಾಣೆ ಮುಂಭಾಗದ ಧ್ವಜ ಸ್ತಂಭದ ಮುಂದೆ ಪ್ರತಿಜ್ಞೆ ಮಾಡಿದರು.
ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಒಂದು ಪ್ರಮುಖ ಅಡಚಣೆಯಾಗಿದೆ ಎಂದು ನಂಬುತ್ತೇನೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರ, ನಾಗರೀಕರು ಮತ್ತು ಖಾಸಗಿ ವಲಯದಂತಹ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕೆಂದು ನಂಬುತ್ತೇನೆ. ಲಂಚವನ್ನು ಪಡೆಯುವುದಿಲ್ಲ ಮತ್ತು ನೀಡುವುದು ಇಲ್ಲ . ಎಲ್ಲಾ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ ಎಂದು ಪೊಲೀಸರು ಪ್ರತಿಜ್ಞಾ ವಿಧಿ ತೆಗೆದುಕೊಂಡರು.