ದೊಡ್ಡಬಳ್ಳಾಪುರ :ಹಿಂದೂಪುರದಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 112 ವಾಹನದಲ್ಲಿ ಚೇಸಿಂಗ್ ನಡೆಸಿದ ಪೊಲೀಸರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2 ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನ ವಶಕ್ಕೆ ಪಡೆದಿದ್ದಾರೆ.
2 ಸಾವಿರ ಕೆಜಿ ಗೋಮಾಂಸ ಸಾಗಾಟ : ನಾಲ್ವರು ಪೊಲೀಸ್ ವಶಕ್ಕೆ - ಅಕ್ರಮ ಗೋಮಾಂಸ ಸಾಗಾಟ
112 ವಾಹನದಲ್ಲಿ ಚೇಸಿಂಗ್ ನಡೆಸಿದ ಪೊಲೀಸರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2 ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನ ವಶಕ್ಕೆ ಪಡೆದಿದ್ದಾರೆ..
ಅಕ್ರಮ ಗೋಮಾಂಸ ಸಾಗಾಟ
ದೊಡ್ಡಬಳ್ಳಾಪುರ ವಿಭಾಗದ ಪೊಲೀಸರು ದೊಡ್ಡಬಳ್ಳಾಪುರ-ಹಿಂದೂಪುರ ರಸ್ತೆಯ ಗುಂಜೂರು ಬಳಿಯ ಕಾರ್ಯ ನಿಮಿತ್ತ ತೆರಳುತ್ತಿದ್ದರು. ಈ ವೇಳೆ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನದಲ್ಲಿದ್ದವರನ್ನ ಮಾತನಾಡಿಸಲು ಮುಂದಾಗಿದ್ದಾರೆ. ಪೊಲೀಸರನ್ನು ಕಂಡ ಟಾಟಾ ಏಸ್ನಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದಾರೆ.
ತಕ್ಷಣ 112 ವಾಹನದಲ್ಲಿ ಪೊಲೀಸರು ಚೇಸಿಂಗ್ ನಡೆಸಿ ಪರಾರಿಯಾಗಲು ಯತ್ನಿಸಿದವರನ್ನ ಹಿಡಿದಿದ್ದಾರೆ. ವಾಹನ ತಪಾಸಣೆ ನಡೆಸಿದ್ದಾಗ ಗೋಮಾಂಸ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.