ಆನೇಕಲ್ :ಇಲ್ಲಿನ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡೀಸ್ ಬಡಾವಣೆಯ ಗಾರ್ಡನ್ ಅಪಾರ್ಟ್ಮೆಂಟ್ನ 5ನೇ ಕಟ್ಟಡದಿಂದ ಕೆಳಗೆ ಹಾರಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಬೇಗೂರು ಟ್ರಮೀಸ್ ಶಾಲೆಯ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಪಾಟೀಲ್ ಮೃತಪಟ್ಟ ವಿದ್ಯಾರ್ಥಿ. ವೈದ್ಯ ಶರಣು ಪಾಟೀಲ್ ಮತ್ತು ಮಮತಾರ ಮುದ್ದಿನ ಏಕೈಕ ಮಗನಾಗಿದ್ದ.
ಶರಣು ಪಾಟೀಲ್ ಮತ್ತು ಮಮತಾ ನಾರಾಯಣ ಹೆಲ್ತ್ ಸಿಟಿಯ ಸ್ಪರ್ಶ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞನಾಗಿದ್ದರು. ಕಳೆದ ತಿಂಗಳಿನಿಂದ ಮೊಬೈಲನ್ನೇ ನೋಡುತ್ತಾ ಇರುತ್ತಿದ್ದ. ಮೊಬೈಲ್ ಇಲ್ಲದೆ ಮನೆ ಬಿಟ್ಟು ಹೆಚ್ಚು ಆಚೆಗೆ ಬರುತ್ತಿರಲಿಲ್ಲ. ಫುಟ್ಬಾಲ್ ಆಟಗಾರನಾಗಿದ್ದ ಆತ ತಿಂಗಳಿಂದ ಯಾರೊಂದಿಗೂ ಬೆರೆಯುತ್ತಿರಲಿಲ್ಲವೆಂದು ಗೆಳೆಯರು ತಿಳಿಸಿದ್ದಾರೆ.