ಕರ್ನಾಟಕ

karnataka

ETV Bharat / state

ಮಳೆ ಅವಾಂತರಕ್ಕೂ ಮುನ್ನ ಎಚ್ಚೆತ್ತ ಜಿಲ್ಲಾಡಳಿತ.. ಹೊಸಕೋಟೆ, ದೇವನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕು.. - undefined

ಕಳೆದ ವರ್ಷ ಸುರಿದಿದ್ದ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಮೀನಿನ ತೋಟ ಬಡಾವಣೆಗಳೆಲ್ಲ ನೀರಿನಲ್ಲಿ ಮುಳುಗಡೆಯಾಗಿ ಜನರು ಸಂಕಷ್ಟಕ್ಕೀಡಾಗಿದ್ದರು. ಇದರಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ದೇವನಹಳ್ಳಿ, ಹೊಸಕೋಟೆಯಲ್ಲಿ ಒತ್ತುವರಿ ತೆರವಿಗೆ ಮುಂದಾಗಿದೆ..

Rajakaluve encroachment clearance operation
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿರುವುದು

By

Published : Jul 7, 2023, 6:55 PM IST

Updated : Jul 7, 2023, 7:18 PM IST

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

ದೇವನಹಳ್ಳಿ:ರಾಜ್ಯದಲ್ಲಿ ಮುಂಗಾರು ಇದೀಗ ಪ್ರಾರಂಭವಾಗ್ತಿದ್ದು ಹಲವು ಕಡೆ ಈಗಾಗಲೇ ಮಳೆರಾಯನ ಅವಾಂತರಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೆ ಇದೀಗ ಸಿಟಿ ಔಟ್ ಸ್ಕರ್ಟ್​​​ನಲ್ಲಿಯೂ ಜಿಲ್ಲಾ ಅಧಿಕಾರಿಗಳು ಅರ್ಲಟ್ ಆಗಿದ್ದು ರಾಜಕಾಲುವೆಗಳ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ. ಆದ್ರೆ, ಒತ್ತುವರಿ ತೆರವು, ದ್ವೇಷದ ಒತ್ತುವರಿ ತೆರವು ಅಂತ ಕೆಲವರು ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದಿರುವ ಹೈಡ್ರಾಮಾ ಇಂದು ಕೂಡಾ ಜರುಗಿತು.

ಅಂದ ಹಾಗೆ ಕಳೆದ ವರ್ಷ ಸುರಿದಿದ್ದ ಮಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿ ಮಾಡಿತ್ತು. ಜಮೀನು ತೋಟ ಬಡಾವಣೆಗಳೆಲ್ಲ ನೀರಿನಿಂದ ಮುಳುಗಡೆಯಾಗಿ ಜನರು ಸಂಕಷ್ಟಕ್ಕೀಡಾಗಿದ್ದರು. ಇದರಿಂದಾಗಿ ಈ ಬಾರಿಯ ಮಳೆಗಾಲದಲ್ಲಿ ಅಂತಹ ಘಟನೆಗಳು ಮರುಕಳಿಸದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿ ಒತ್ತುವರಿ ತೆರವು ಕಾರ್ಯ ಹಮ್ಮಿಕೊಂಡಿದೆ.

ಹೊಸಕೋಟೆ ಕುವೆಂಪು ನಗರದ ಮೂಲಕ ಹಾದು ಹೋಗಿರುವ ರಾಜಕಾಲುವೆಗಳ ಮೇಲೆ ನಿರ್ಮಿಸಿದ್ದ ಶೆಡ್​ಗಳನ್ನು ಅಧಿಕಾರಿಗಳು ಜೆಸಿಬಿ ಮೂಲಕ ಕಾಂಕ್ರಿಟ್ ಹೊಡೆದು ಹಾಕುವುದರೊಂದಿಗೆ ಒತ್ತುವರಿ ತೆರವು ಮಾಡಿದರು. ಆದರೆ ಈ ವೇಳೆ ಎಲ್ಲ ಕಡೆಯಿಂದ ವಿರೋಧಗಳು ವ್ಯಕ್ತವಾದವು. ಕೇವಲ ನಮ್ಮದು ಶೆಡ್​ ಮಾತ್ರ ಹೊಡೆಯಲು ಬಂದಿದ್ದು ಯಾಕೆ ?, ರಾಜಕಾಲುವೆ ತೆರವುಗೊಳಿಸುವದಾದ್ರೆ ಎಲ್ಲಾ ಕಡೆ ಮಾಡಲಿ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕಿದರು.

ಅದೇ ರೀತಿ ದೇವನಹಳ್ಳಿ ತಾಲೂಕಿನ ಸಿಂಗವಾರ ಸೇರಿದಂತೆ ಹಲವೆಡೆ ಸಹ ಜೆಸಿಬಿಗಳಿಂದ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ತೋಟ ಜಮೀನು ಮತ್ತು ಶೆಡ್​ಗಳನ್ನು ತೆರವುಗೊಳಿಸಿದರು. ಈ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ನಮ್ಮ ಮನೆ, ಜಮೀನು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಎಲ್ಲರದ್ದೂ ತೆರವು ಮಾಡಬೇಕು. ಅದನ್ನು ಹೊರತು ಪಡಿಸಿ ರಾಜಕೀಯ ನಾಯಕರ ಮಾತು ಕೇಳಿ, ದ್ವೇಷ ರಾಜಕಾರಣ ಮಾಡಬಾರದು ಅಂತ ಕಿಡಿ ಕಾರಿದರು.

ಈಗಾಗಲೇ ರಾಜಕಾಲುವೆ ಗುರುತು ಮಾಡಿದ್ದೀವಿ ಅಂತ ಬಂದ ಅಧಿಕಾರಿಗಳು ಕಾಲುವೆ ಹಿಂದೆ ಮುಂದೆ ಇರುವ ಮನೆ ಜಮೀನು ಬಿಟ್ಟು ನಮ್ಮನ್ನೆ ಟಾರ್ಗೆಟ್ ಮಾಡಿಕೊಂಡು ಬಡವರ ಮನೆ ಜಮೀನು ಕಿತ್ತುಕೊಳ್ತಿದ್ದಾರೆ ಅಂತ ಸ್ಥಳಿಯರು ಆಕ್ರೋಶ ಹೊರ ಹಾಕಿದ್ರು. ಇನ್ನೂ ಹೊಸಕೋಟೆ ಮತ್ತು ದೇವನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಡಿಸಿ ಶಿವಶಂಕರ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಲುವೆ ಒತ್ತುವರಿಯಾಗಿದೆ ಅಂತ ಗುರುತು ಮಾಡಿದ್ದೇವೆ. ಇದೀಗ ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿ ತೆರವು ಮಾಡ್ತಿದ್ದು, ಬಡವರು, ಪ್ರಭಾವಿಗಳು ಎನ್ನುವದಲ್ಲದೇ ಎಲ್ಲಿ ಯಾರೇ ರಾಜಕಾಲುವೆ ಒತ್ತುವರಿ ಮಾಡಿದ್ದರೂ, ಅಂಥ ಕಡೆ ತೆರವು ಮಾಡ್ತೀವಿ ಎಂದು ಹೇಳಿದರು.

ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕಳೆದ ವರ್ಷ ಆಗಿದ್ದ ಮಳೆ ಅವಾಂತರದಿಂದ ಇದೀಗ ಅಧೀಕಾರಿಗಳು ಎಚ್ಚೆತ್ತುಕೊಂಡಿದ್ದು, ಮಳೆ ಶುರುವಾಗ್ತಿದ್ದಂತೆ ರಾಜಕಾಲವೆಗಳ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಆದ್ರೆ ಈ ತೆರವು ಕಾರ್ಯ ನಿಜವಾಗ್ಲೂ ಎಲ್ಲೆಡೆ ನಡೆಯುತ್ತಾ ಅಥವಾ ಕೆಲವೊಂದು ಕಡೆ ಮಾಡಿ ಸುಮ್ಮನಾಗ್ತಾರ ಅನ್ನೂದನ್ನು ಕಾದು ನೋಡಬೇಕಿದೆ.

ಇದನ್ನೂಓದಿ:ಇದು ಪೂರ್ಣ ಬಜೆಟ್​, ಪಂಚ ಗ್ಯಾರಂಟಿಗಳಿಗೆ ಅಗತ್ಯ ಹಣ ಮೀಸಲು: ಸಿಎಂ ಸಿದ್ದರಾಮಯ್ಯ

Last Updated : Jul 7, 2023, 7:18 PM IST

For All Latest Updates

TAGGED:

PKG

ABOUT THE AUTHOR

...view details