ಕರ್ನಾಟಕ

karnataka

ETV Bharat / state

ರಸ್ತೆ ಕಾಮಗಾರಿಗೆ ಭೂ ಮಾಲೀಕನಿಂದ ಅಡ್ಡಿ: ತಿರುಗಿಬಿದ್ದ ಗ್ರಾಮಸ್ಥರು - ರಾಷ್ಟ್ರೀಯ ಹೆದ್ದಾರಿ

ಎರಡು ಸಾವಿರ ಜನರಿಗೆ ಅನುಕೂಲಕರವಾಗಿರುವ ರಸ್ತೆಗೆ ಭೂಮಾಲೀಕ ಅಡ್ಡಿಪಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಆತನ ವಿರುದ್ಧ ತಿರುಗಿ ಬಿದ್ದಿದ್ದಾರೆ.

disruption-of-road-work-by-land-owner
ರಸ್ತೆ ಕಾಮಗಾರಿಗೆ ಭೂ ಮಾಲೀಕನಿಂದ ಅಡ್ಡಿ: ತಿರುಗಿಬಿದ್ದ ಗ್ರಾಮಸ್ಥರು

By

Published : Jan 5, 2021, 7:42 PM IST

ನೆಲಮಂಗಲ (ಬೆಂ.ಗ್ರಾ):ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಭೂ ಮಾಲೀಕ ಅಡ್ಡಿಪಡಿಸಿದ್ದರಿಂದಾಗಿ ಗ್ರಾಮಸ್ಥರು ಮತ್ತು ಭೂಮಾಲೀಕನ ನಡುವೆ ಮಾತಿನ ಚಕಮಕಿ ನಡೆದಿದೆ.

ಭೂಮಾಲೀಕನೊಂದಿಗೆ ಗ್ರಾಮಸ್ಥರ ಮಾತಿನ ಚಕಮಕಿ

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಹೊನ್ನಸಂದ್ರ ರಸ್ತೆಯಲ್ಲಿ ರಸ್ತೆ ಕಾಮಗಾರಿ ವಿಷಯ ಸಂಬಂಧ ಗಲಾಟೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರಿಂದ ಹೊನ್ನಸಂದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಸುಮಾರು 2.5 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿತ್ತು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 3 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

200 ಮೀಟರ್ ರಸ್ತೆ ನಿರ್ಮಾಣಕ್ಕೆ ಭೂ ಮಾಲೀಕ ವಿರೋಧ ವ್ಯಕ್ತಪಡಿಸಿದ್ದಾನೆ. ಗ್ರಾಮದ 2 ಸಾವಿರ ಜನರಿಗೆ ಅನುಕೂಲಕರವಾಗಿರುವ ರಸ್ತೆಗೆ ಭೂಮಾಲೀಕ ಅಡ್ಡಿಪಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ... ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ABOUT THE AUTHOR

...view details