ಬೆಂಗಳೂರು :ನಾಯಕತ್ವ ಬದಲಾವಣೆ ವಿಚಾರ ಪ್ರತಿಕ್ರಿಯಿಸದೇ ಸಭೆಯಲ್ಲಿ ಆ ಬಗ್ಗೆ ಚರ್ಚೆ ಮಾಡ್ತೀನಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಸಭೆಯಲ್ಲಿ ಚರ್ಚೆ : ಅರುಣ್ ಸಿಂಗ್ - Arun Singh arrives in Bangalore
ರಾಜ್ಯ ಬಿಜೆಪಿ ಗೊಂದಲದ ಗೂಡಾಗಿದ್ದು, ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಬೆಂಗಳೂರಿಗೆ ಆಗಮಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ..
ಬೆಂಗಳೂರಿನ ಕೆಐಎಎಲ್‌ಗೆ ಆಗಮಿಸಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಕೊರೊನಾ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಬುತ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಮಾಡಿರೋ ಕೆಲಸಗಳ ಬಗ್ಗೆ ಚರ್ಚೆ ಮಾಡ್ತೀವಿ. ಕಾಂಗ್ರೆಸ್-ಜೆಡಿಎಸ್‌ನವ್ರು ಏನು ಮಾಡಿಲ್ಲ ಅಂತ ಆರೋಪ ಮಾಡ್ತಾರೆ ಎಂದರು.
ಸಭೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆಯೂ ಚರ್ಚೆ ಮಾಡ್ತೀವಿ ಎಂದು ಹೇಳಿ ವಿಮಾನ ನಿಲ್ದಾಣದಿಂದ ಪಯಣ ಬೆಳೆಸಿದರು.
ಓದಿ:ಕೋವ್ಯಾಕ್ಸಿನ್‌ನಲ್ಲಿ ನವಜಾತ ಕರು ಸೀರಮ್ ಬಳಕೆಯಾಯ್ತೇ.. ಕೇಂದ್ರ ಆರೋಗ್ಯ ಸಚಿವಾಲಯದ ಸ್ಪಷ್ಟನೆ ಹೀಗಿದೆ..