ದೊಡ್ಡಬಳ್ಳಾಪುರ: ಬೀದಿ ಬದಿಯ ಟೆಂಟ್ಗಳಲ್ಲಿ ವಾಸವಾಗಿರುವ ಅಲೆಮಾರಿಗಳಿಗೆ ಮಾತ್ರ ದಿನಸಿ ಸೆರಿದಂತೆ ಆಹಾರ ಪದಾರ್ಥಗಳನ್ನ ವಿತರಣೆ ಮಾಡುತ್ತಿದ್ದಾರೆಂದು ಸ್ಲಂ ನಿವಾಸಿಗಳು ಆಹಾರ ವಿತರಣೆಗೆ ಬಂದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನಸಿ ವಿತರಣೆಯಲ್ಲಿ ತಾರತಮ್ಯ: ದಾನಿಗಳ ವಿರುದ್ಧ ಮುಗಿಬಿದ್ದ ಸ್ಲಂ ನಿವಾಸಿಗಳು - doddaballapura news
ಸರ್ಕಾರ ಮತ್ತು ಸಂಘ ಸಂಸ್ಥೆಗಳು ನಿರ್ಗತಿಕರಿಗೆ ದವಸ ಧಾನ್ಯಗಳ ವಿತರಣೆ ಮಾಡುತ್ತಿವೆ. ಆದರೆ, ದಿನಸಿ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆಹಾರ ವಿತರಣೆಗೆ ಬಂದಿದ್ದ ಸಂಘಟನೆಯ ವಿರುದ್ಧ ನಿರ್ಗತಿಕರು ಮುಗಿಬಿದ್ದರು.
ಲಾಕ್ ಡೌನ್ ಜಾರಿಯಾಗಿ ಕೆಲಸವಿಲ್ಲದೇ ಜನ ನಿರ್ಗತಿಕರಾಗಿದ್ದಾರೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ನಿರ್ಗತಿಕರಿಗೆ ದವಸ ಧಾನ್ಯಗಳ ವಿತರಣೆ ಮಾಡುತ್ತಿವೆ. ಆದರೆ, ದಿನಸಿ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆಹಾರ ವಿತರಣೆಗೆ ಬಂದಿದ್ದ ಸಂಘಟನೆಯ ವಿರುದ್ಧ ನಿರ್ಗತಿಕರು ಮುಗಿಬಿದ್ದರು.
ದೊಡ್ಡಬಳ್ಳಾಪುರ ನಗರದ ಮುತ್ಸಂದ್ರ ಬಳಿ ಸ್ಲಂ ನಿವಾಸಿಗಳು ಮತ್ತು ಅಲೆಮಾರಿಗಳು ಟೆಂಟ್ ಹಾಕಿಕೊಂಡು ವಾಸವಾಗಿದ್ದಾರೆ. ಆದರೆ ಸ್ಲಂ ನಿವಾಸಿಗಳಿಗೆ ಯಾರೂ ಕೂಡ ಸಹಾಯ ಮಾಡಲು ಮುಂದಾಗುತ್ತಿಲ್ಲ ಈ ಹಿನ್ನೆಲೆ ಟೆಂಟ್ನಲ್ಲಿರುವ ಜನರಿಗೆ ಸಹಾಯ ಮಾಡಲು ಬಂದವರ ವಿರುದ್ಧ ಕಿಡಿಕಾರಿದ್ದಾರೆ.