ದೇವನಹಳ್ಳಿ:ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನ ವಿಲ್ಲಾದಲ್ಲಿ ವಾಸವಾಗಿದ್ದ ಆಸ್ಟ್ರೇಲಿಯಾ ಮೂಲದ ಕ್ಲಬ್ ಫುಟ್ಬಾಲ್ ಆಟಗಾರನ ರೂಮ್ಗೆ ನುಗ್ಗಿದ ಕಳ್ಳರು 22 ಲಕ್ಷದ ರೂ.ಮೌಲ್ಯದ ವಜ್ರಾಭರಣ ದೋಚಿ ಪರಾರಿಯಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ನಂದಿರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ವಿಲ್ಲಾ ನಂಬರ್ 175ರಲ್ಲಿ ಫುಟ್ಬಾಲ್ ಆಟಗಾರ ವೊಹಾನ್ ಟ್ರೋಲಪಿ ವಾಸವಾಗಿದ್ದರು. ಇವರು ನಗರದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಟವಾಡಲು ಹೊರ ಹೋಗಿದ್ದ ಸಂದರ್ಭದಲ್ಲಿ ರೂಮ್ಗೆ ನುಗ್ಗಿದ ಖದೀಮರು ಕೃತ್ಯ ಎಸಗಿದ್ದಾರೆ.