ಬೆಂಗಳೂರು/ಆನೇಕಲ್: ಬೆಂಗಳೂರು ಸರ್ಜಾಪುರ ರಸ್ತೆಯ ದೊಮ್ಮಸಂದ್ರದಲ್ಲಿ ಊರ ದೇವತೆಗಳ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ವಿಜೃಂಭಣೆಯ ದೊಮ್ಮಸಂದ್ರ ಜಾತ್ರಾ ಮಹೋತ್ಸವ - undefined
ದೊಮ್ಮಸಂದ್ರದಲ್ಲಿ ಊರ ದೇವತೆಗಳ ಭ್ರಹ್ಮ ರಥೋತ್ಸವ ಜಾತ್ರಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ತೇರು, ಉತ್ಸವ, ನಾಟಕ, ಪಲ್ಲಕ್ಕಿ, ಕರಗ ಅಂತೆಲ್ಲಾ ವಿಧ ವಿಧವಾದ ಜಾನಪದ ಸೊಗಡಿನ ಸಾಂಸ್ಕೃತಿಕ ದಿಬ್ಬಣಗಳ ಮುಖಾಂತರ ಊರ-ಊರ ನಡುವೆ, ಧರ್ಮ-ಧರ್ಮ, ಜಾತಿ-ಸಮುದಾಯಗಳ ನಡುವೆ ಐಕ್ಯತೆಯ ಸಂಕೇತವಾಗಿ ಒಮ್ಮತದಿಂದ ಜಾತ್ರೆಯನ್ನು ನಡೆಸ್ತಾರೆ. ಮತ್ತೊಂದೆಡೆ ಗ್ರಾಮೀಣ ಸಂಪತ್ತನ್ನು ಹಾಗೇ ಉಳಿಸಿಕೊಂಡು ಬರಲಾಗಿದೆ. ಹೀಗಾಗಿ ಬೆಂಗಳೂರು-ಸರ್ಜಾಪುರ ರಸ್ತೆಯ ದೊಮ್ಮಸಂದ್ರದಲ್ಲಿ ಊರ ದೇವತೆಗಳ ಬ್ರಹ್ಮ ರಥೋತ್ಸವ ನಡೆಯಿತು.
ದೊಮ್ಮಸಂದ್ರದ ಕಾಶಿ ವಿಶ್ವನಾಥೇಶ್ವರ, ಗಣಪತಿ ಸುಭ್ರಮಣ್ಯ, ಸ್ವಾಮಿ ರಥೋತ್ಸವಗಳು ಜರುಗಿದವು. ಅಲ್ಲದೆ ಮುತ್ಯಾಲಮ್ಮ ಕರಗ ಉತ್ಸವವೂ ಆರಂಭಗೊಂಡು ನೆರೆದ ಭಕ್ತಾದಿಗಳ ಕಣ್ಮನ ಸೆಳೆದವು. ಊರ ಪ್ರಮುಖ ರಸ್ತೆಗಳಲ್ಲಿ ಜಾತ್ರೆಯ ಮೆರಗು ಬೆರಗುಗೊಳಿಸುವಂತೆ ನೆರವೇರಿತು.