ಕರ್ನಾಟಕ

karnataka

ETV Bharat / state

ಕಣ್ಮನ ಸೆಳೆಯುತ್ತಿದೆ ದೇವನಹಳ್ಳಿ ವೇಣುಗೋಪಾಲ ಸ್ವಾಮಿ ಲಕ್ಷದೀಪೋತ್ಸವ - Venugopalaswamy Ratna Diamond Jewellery

ದೇವನಹಳ್ಳಿ ವೇಣುಗೋಪಾಲಸ್ವಾಮಿ ಸ್ವಾಮಿಯ ಸನ್ನಿಧಿಯಲ್ಲಿ ಅದ್ದೂರಿಯಾಗಿ ಲಕ್ಷ ದೀಪೋತ್ಸವ ನಡೆಯುತ್ತಿದೆ.

Devanahalli Venugopal Lakshdeepotsava is attracting attention
ಕಣ್ಮನ ಸೆಳೆಯುತ್ತಿದೆ ದೇವನಹಳ್ಳಿ ವೇಣುಗೋಪಾಲ ಲಕ್ಷದೀಪೋತ್ಸವ

By

Published : Dec 8, 2022, 11:00 PM IST

Updated : Dec 9, 2022, 7:32 PM IST

ಬೆಂಗಳೂರು:ದೇವನಹಳ್ಳಿಯ ಇತಿಹಾಸಪ್ರಸಿದ್ದ ವೇಣುಗೋಪಾಲಸ್ವಾಮಿ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಕಳೆದ‌ ಎಂಟು ದಿನಗಳಿಂದ ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಭಕ್ತ ಸಾಗರವೇ ಹರಿದು ಬರುತ್ತಿದೆ. ಇಂದು ಇಡೀ‌ ರಾತ್ರಿ ವೇಣುಗೋಪಾಲಸ್ವಾಮಿ‌ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವನಹಳ್ಳಿ ವೇಣುಗೋಪಾಲ ಸ್ವಾಮಿ ಲಕ್ಷದೀಪೋತ್ಸವ

ಬೆಂಗಳೂರಿನ ಅಕ್ಕಪಕ್ಕ ಜಿಲ್ಲೆಗಳಿಂದ ಭಕ್ತರು ಸ್ವಾಮಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪಟ್ಟಣದ ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಮಾಡಲಾಗಿದ್ದು ಕಣ್ಮನ ಸೆಳೆಯುತ್ತಿದೆ. ವೇಣುಗೋಪಾಲಸ್ವಾಮಿಗೆ ವಜ್ರಖಚಿತ ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ಪಟ್ಟಣದ ಚೌಕದಲ್ಲಿ ತೇರಿನ ಪಲ್ಲಕ್ಕಿ ಆರ್ಕಷಣೆಯ ಕೇಂದ್ರಬಿಂದುವಾಗಿತ್ತು. ರಾತ್ರಿ 8 ಗಂಟೆಗೆ ವಿಶೇಷ ಬಾಣ ಬಿರುಸಿನ ಶೋ ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ :ವಿದ್ಯುತ್ ದೀಪಾಲಂಕಾರ.. ಕಂಗೊಳಿಸಿದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ನಿಜಗಲ್ಲು ಸಿದ್ದರಬೆಟ್ಟ

Last Updated : Dec 9, 2022, 7:32 PM IST

ABOUT THE AUTHOR

...view details