ಬೆಂಗಳೂರು: ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ದೇವನಹಳ್ಳಿ ಪುರಸಭೆಯ ಮತ ಎಣಿಕೆ ದಿನಾಂಕವನ್ನು ಮುಂದೂಡಲಾಗಿದೆ.
ದೇವನಹಳ್ಳಿ ಪುರಸಭೆ ಚುನಾವಣೆ ಕೌಂಟಿಂಗ್ ಮುಂದೂಡಿಕೆ - undefined
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆಯ ಮತ ಎಣಿಕೆಯನ್ನು ಮುಂದೂಡಲಾಗಿದೆ. ನೆಲಮಂಗಲ ಪುರಸಭೆಯ ಚುನಾವಣೆ ಮುಗಿದ ನಂತರ, ನೆಲಮಂಗಲ ಮತ್ತು ದೇವನಹಳ್ಳಿ ಎರಡು ಪುರಸಭೆಯ ಕೌಂಟಿಂಗ್ ಒಂದೇ ದಿನ ನಡೆಯಲಿದೆ.
ಹೌದು, ರಾಜ್ಯದ ಎಲ್ಲಾ ಪುರಸಭೆ ಮತ್ತು ನಗರ ಸಭೆಗಳ ಮತ ಎಣಿಕೆ ನಾಳೆ ನಡೆಯಲಿದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆಯ ಮತ ಎಣಿಕೆ ದಿನ ಮಾತ್ರ ಬದಲಾವಣೆ ಮಾಡಲಾಗಿದೆ. ನಾಳೆ ನಡೆಯಬೇಕಿದ್ದ ಕೌಂಟಿಂಗ್ನ್ನು ಜೂನ್ 3ಕ್ಕೆ ಮುಂದೂಡಲಾಗಿದ್ದು, ದೇವನಹಳ್ಳಿ ಪುರಸಭೆ ಗಾದಿಗೆ ಯಾರಿಗೆ ಅನ್ನೋದು ತಿಳಿಯಬೇಕಾದರೆ ಇನ್ನೂ ಮೂರು ದಿನ ಕಾಯಲೇಬೇಕಾಗಿದೆ. ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಕರಿಗೌಡರ್ ಅವರು ನಾಳೆ ನಡೆಯಬೇಕಿದ್ದ ಕೌಂಟಿಂಗ್ ಅನ್ನು ಜೂನ್ 3ಕ್ಕೆ ಮುಂದೂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪುರಸಭೆಯ ಚುನಾವಣೆ ಜೂನ್ 1ರಂದು ನಡೆಯಲಿದ್ದು, ಜೂನ್ 3ರಂದು ಮತ ಎಣಿಕೆ ನಡೆಯಲಿದೆ. ಹೀಗಾಗಿ ನೆಲಮಂಗಲ ಮತ್ತು ದೇವನಹಳ್ಳಿ ಎರಡು ಪುರಸಭೆಯ ಕೌಂಟಿಂಗ್ ಒಂದೇ ದಿನ ನಡೆಯಲಿದೆ.