ಕರ್ನಾಟಕ

karnataka

ETV Bharat / state

ಅಧೋಗತಿಗೆ ಅಂತರ್ಜಲ.... ದೇವನಹಳ್ಳಿಯಲ್ಲಿ 2 ಸಾವಿರ ಅಡಿ ಕೊರೆದರೂ ನೀರಿಲ್ಲ ! - undefined

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳು ಅನುಭವಿಸುತ್ತಿವೆ. ದೇವನಹಳ್ಳಿ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳು ಬತ್ತಿ ಹೋಗಿದೆ. ಇದರಿಂದ ಜನ, ಜಾನುವಾರಿಗಳು ನಿತ್ಯ ನೀರಿಗೆ ಪರದಾಡುವಂತಾಗಿದೆ.

ಬತ್ತಿ ಹೋದ ಕೆರೆಗಳು

By

Published : May 3, 2019, 3:27 PM IST

ಬೆಂಗಳೂರು: ನೀರಿನ ಮೂಲಗಳೆ ಮಾಯವಾದರೆ, ಜೀವರಾಶಿಗಳ ಪಾಡೇನು? ಇಂಥ ಪರಿಸ್ಥಿತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳು ಅನುಭವಿಸುತ್ತಿವೆ. ದೇವನಹಳ್ಳಿ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳು ಬತ್ತಿ ಹೋಗಿದೆ. ಇದರಿಂದ ಜನ, ಜಾನುವಾರಿಗಳು ನಿತ್ಯ ನೀರಿಗೆ ಪರದಾಡುವಂತಾಗಿದೆ.

ಎರಡು ದಶಕಗಳ ಹಿಂದೆ ಸುತ್ತಲಿನ ಬೆಟ್ಟ, ಎತ್ತರದ ಪ್ರದೇಶದಿಂದ ಹರಿದು ಬಂದ ನೀರು, ನೂರಾರು ಎಕರೆ ವಿಸ್ತೀರ್ಣದ ಈ ಕೆರೆಗಳಲ್ಲಿ ಸಂಗ್ರಹಗೊಳ್ಳುತ್ತಿತ್ತು. ಅದರೆ ನಿರ್ವಹಣೆ ಕೊರತೆಯಿಂದಾಗಿ ದೇವನಹಳ್ಳಿಯ ದೊಡ್ಡ ಕೆರೆ ಬರಡಾಗಿದೆ. ಈ ಕೆರೆ ಸುತ್ತಲಿನ ಸುಮಾರು 50 ಗ್ರಾಮಗಳ ಅಂತರ್ಜಲ ಮಟ್ಟ ಕೂಡಾ ಪಾತಾಳಕ್ಕಿಳಿದಿದೆ. 1500 ರಿಂದ 2000 ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ಹನಿ ನೀರು ಬರದಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳೂ ಮಂದಗತಿಯಲ್ಲಿ ಸಾಗುತ್ತಿವೆ ಎಂದು ಸ್ಥಳೀಯ ನಿವಾಸಿ ಪ್ರಶಾಂತ್ ಹೇಳಿದರು.

ಬತ್ತಿ ಹೋದ ಕೆರೆಗಳು

ಇದೇ ವರ್ಷದಲ್ಲೇ ದೇವನಹಳ್ಳಿ ತಾಲೂಕಿನಲ್ಲಿ 150ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅವುಗಳಲ್ಲಿ ಶೇ.10 ರಷ್ಟು ಕೊಳವೆ ಬಾವಿಗಳಲ್ಲಿ ಮಾತ್ರ ನೀರು ದೊರಕಿದೆ. ಇನ್ನೂ ಕೆಲವು ಹಳ್ಳಿಗಳಿಗೆ ಟ್ಯಾಂಕರ್​ ನೀರೆ ಗತಿ. ಕಾಳಜಿಯಿಂದ ಸಾಕಿ ಬೆಳೆಸಿದ ಜಾನುವಾರುಗಳನ್ನು ರೈತರು ವಿಧಿಯಿಲ್ಲದೇ ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಲಲಿತ ಬೇಸರ ವ್ಯಕ್ತಪಡಿಸಿದರು.

ಹತ್ತು ವರ್ಷ ಕಳೆದರೂ ಮುಗಿಯದ ಎತ್ತಿನ ಹೊಳೆ ಯೋಜನೆ:

ಸುತ್ತಲಿನ 20ಕ್ಕು ಹೆಚ್ಚು ಕೆರೆಗಳಿಗೆ 12 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ತುಂಬಿಸುವ ಸರ್ಕಾರದ ಎತ್ತಿನ ಹೊಳೆ, ಎನ್.ಎಚ್.ವ್ಯಾಲಿ, ಕೆಸಿ ವ್ಯಾಲಿ ಯೋಜನೆಗಳು ಪೂರ್ಣಗೊಂಡಿಲ್ಲ. ಈ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಲ್ಲಿ ದೇವನಹಳ್ಳಿ ಸೇರಿದಂತೆ ಅನೇಕ ಕೆರೆಗಳಿಗೆ ಜೀವ ತುಂಬಿದಂತಾಗುತ್ತದೆ.

ಈ ನಡುವೆ ರಾಜ್ಯ ಸರ್ಕಾರ ಎತ್ತಿನ ಹೊಳೆ, ಎನ್​ಎಚ್​​ ವ್ಯಾಲಿ, ಕೆಸಿ ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಬಯಲು ಸೀಮೆಗೆ ನೀರು ಹರಿಸುವ ಯೋಜನೆ ಕಾಮಗಾರಿ ಆರಂಭಗೊಂಡಿತ್ತು. ಇದರಿಂದ ರೈತರು ಸೇರಿದಂತೆ ಜನರಲ್ಲೂ ಮಂದಹಾಸ ಮೂಡಿತು. ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದ್ದು, ಕಳೆದ ಹತ್ತು ವರ್ಷಗಳಾದರೂ ಇನ್ನು ಕಾಮಗಾರಿ ಮುಗಿದಿಲ್ಲ, ನೀರು ಬಂದಿಲ್ಲ.

For All Latest Updates

TAGGED:

ABOUT THE AUTHOR

...view details