ದೇವನಹಳ್ಳಿ( ಬೆಂಗಳೂರು):ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬನ ಪರ್ಸ್ನಲ್ಲಿ ಜೀವಂತ ಗುಂಡು ಪತ್ತೆಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾರ್ಥ್ವೆಸ್ಟ್ ದೆಹಲಿ ಮೂಲದ ಕಾರ್ತಿಕೇಯ ಭಾರಧ್ವಜ್ ಎಂಬ ಪ್ರಯಾಣಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ಸಮಯದಲ್ಲಿ ಸಿಐಎಸ್ಎಫ್ ಅಧಿಕಾರಿಗಳು ಲಗೇಜುಗಳ ತಪಾಸಣೆ ನಡೆಸಿದ್ದು, ಈ ವೇಳೆ ಆತನ ಪರ್ಸ್ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. 7.65 (ಕೆಎಫ್) ಎಂಎಂನ ಜೀವಂತ ಗುಂಡು ಇದಾಗಿದೆ ಎಂದು ಹೇಳಲಾಗಿದೆ.