ಕರ್ನಾಟಕ

karnataka

ETV Bharat / state

ರಾಜಕೀಯ ವೈಷಮ್ಯ: 20 ಲಕ್ಷ ಮೌಲ್ಯದ ಟೊಮಾಟೊ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು! - Destruction of tomato crop in Kuduregare village of Doddaballapura taluk

ಕಾರನಾಳ  ಗ್ರಾಮದ ಗಂಗಾಧರ್ ಎನ್ನುವ ವ್ಯಕ್ತಿ  ರಾಜಕೀಯ ದ್ವೇಷದಿಂದ ತಮ್ಮ ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ರೈತ ಅಶ್ವತ್ಥ್ ನಾರಾಯಣ್ ಆರೋಪ ಮಾಡಿದ್ದಾರೆ.

Destruction of tomato crop in Kuduregare village of Doddaballapura taluk
20 ಲಕ್ಷ ಮೌಲ್ಯದ  ಟೊಮಾಟೊ  ಬೆಳೆ ನಾಶ ಮಾಡಿದ ದುಷ್ಕರ್ಮಿಗಳು

By

Published : Jan 4, 2021, 3:19 PM IST

ದೊಡ್ಡಬಳ್ಳಾಪುರ: ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿ ರಾಜಕೀಯ ದ್ವೇಷಕ್ಕೆ 3 ಎಕರೆಯಲ್ಲಿ ಬೆಳೆದಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಟೊಮಾಟೊ ಬೆಳೆಯನ್ನು ನಾಶ ಮಾಡಿರುವ ಆರೋಪ ಕೇಳಿಬಂದಿದೆ.

ರೈತ ಅಶ್ವತ್ಥ್ ನಾರಾಯಣ್

"ಕುದುರೆಗೆರೆ ಗ್ರಾಮದಲ್ಲಿನ ನಮ್ಮ 3 ಎಕರೆ 10 ಗುಂಟೆ ಜಾಗದಲ್ಲಿ ಟೊಮಾಟೊ ಬೆಳೆದಿದ್ದೆ. ಫಸಲಿಗೆ ಬಂದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವ ಸಿದ್ಧತೆಯಲ್ಲಿದ್ದೆ. ಆದರೆ, ನಿನ್ನೆ ರಾತ್ರಿ 2 ಗಂಟೆಯ ಸಮಯದಲ್ಲಿ ಹೊಲಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 20 ಲಕ್ಷ ಮೌಲ್ಯದ ಬೆಳೆಯನ್ನು ನಾಶ ಮಾಡಿದ್ದಾರೆ." ಎಂದು ರೈತ ಅಶ್ವತ್ಥ್ ನಾರಾಯಣ್ ತಮ್ಮ ನೋವು ತೋಡಿಕೊಂಡರು.

ಓದಿ:2023ರ ಸಾರ್ವತ್ರಿಕ ಚುನಾವಣೆ ಸ್ವತಂತ್ರವಾಗಿ ಎದುರಿಸುತ್ತೇವೆ: ಕುಮಾರಸ್ವಾಮಿ

ಕಾರನಾಳ ಗ್ರಾಮದ ಗಂಗಾಧರ್ ಎನ್ನುವ ವ್ಯಕ್ತಿ ರಾಜಕೀಯ ದ್ವೇಷದಿಂದ ತಮ್ಮ ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ಅಶ್ವತ್ಥ್ ನಾರಾಯಣ್ ಆರೋಪ ಮಾಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details