ಹೊಸಕೋಟೆ: ಫೇಸ್ಬುಕ್ನಲ್ಲಿ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದರು.
ಎಂ.ಟಿ.ಬಿ ವಿರುದ್ಧ ಅವಹೇಳನಕಾರಿ ಪೋಸ್ಟ್: ವ್ಯಕ್ತಿ ಬಂಧನ, ಠಾಣೆಗೆ ಮುತ್ತಿಗೆ ಹಾಕಿದ ಕೈ ನಾಯಕರು - MTB Nagaraj news
ಎಂ.ಟಿ.ಬಿ. ನಾಗರಾಜ್ ಅವರ ವಿರುದ್ಧ ಅವಹೇಳನಕಾರಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ಹರಳೂರಿನ ರವಿ ಎಂಬ ವ್ಯಕ್ತಿ ಬಂಧಿಸಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿದರು.
ಹರಳೂರಿನ ರವಿ ಬಂಧಿತ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿದರು. ಈ ವೇಳೆ ಠಾಣೆಯ ಅಧಿಕಾರಿ ರಾಜು ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿಯ ಆಧಾರದಲ್ಲಿ ಯಾರನ್ನೂ ಬಂಧಿಸಲಾಗುವುದಿಲ್ಲ. ಅವಹೇಳನಕಾರಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಕರೆದುಕೊಂಡು ಬರಲಾಗಿದೆ ಅಷ್ಟೇ, ನ್ಯಾಯಾಲಯದ ಆದೇಶವಿದ್ದರೆ ಮಾತ್ರ ಅವರನ್ನು ಬಂಧಿಸಬಹುದು. ರವಿಯನ್ನು ಕೇವಲ ವಿಚಾರಣೆಗಾಗಿ ಕರೆತಂದಿದ್ದೇವೆ ಎಂದು ತಿಳಿಸಿ ನಂತರ ರವಿಯನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಶಾಸಕ ಬೈರತಿ ಸುರೇಶ್ ಮಾತನಾಡಿ, ಎಂ.ಟಿ.ಬಿ. ನಾಗರಾಜ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ ನಮ್ಮ ಕಾರ್ಯಕರ್ತರನ್ನು ಅನವಶ್ಯಕವಾಗಿ ಬಂಧಿಸಿ, ಕಿರುಕುಳ ಕೊಡುತ್ತಿದ್ದಾರೆ. ರವಿ ತನಗೆ ಬಂದ ವಿಷಯವನ್ನು ಕೇವಲ ಫಾರ್ವಡ್ ಮಾಡಿದ್ದಾನೆ. ಅದಕ್ಕೆ ಅವನನ್ನು ಬಂಧಿಸಿ ಬಿಜೆಪಿಯವರು ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದು ಅದಕ್ಕೆ ತಮ್ಮ ಪಕ್ಷದ ಯಾವುದೇ ಕಾರ್ಯಕರ್ತ ಬೆದರುವುದಿಲ್ಲ. ಈ ಬಾರಿ ಬಿಜೆಪಿಯನ್ನು ತಾಲ್ಲೂಕಿನಿಂದ ಓಡಿಸುತ್ತೇವೆ' ಎಂದರು.