ಕರ್ನಾಟಕ

karnataka

ETV Bharat / state

ಗೆದ್ದ ಅಭ್ಯರ್ಥಿಯ ಕೊರಳಿಗೆ ವಿಜಯಮಾಲೆ: ದೊಡ್ಡಬಳ್ಳಾಪುರದಲ್ಲಿ ಹೂಮಾಲೆಗೆ ಭಾರಿ ಬೇಡಿಕೆ - ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ

ಎಣಿಕೆ ಕೇಂದ್ರದ ಬಳಿಯೇ ಹೂವಿನಮಾಲೆಗಳ ಭರ್ಜರಿ ಮಾರಾಟ ಶುರುವಾಗಿದ್ದು, ಸಾಮಾನ್ಯ ದಿನಗಳಲ್ಲಿ 50ರಿಂದ 100 ರೂಪಾಯಿಗೆ ಮಾರಾಟವಾಗುತ್ತಿದ್ದ ಹೂವಿನ ಮಾಲೆಗಳು 200 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದೆ.

flower
flower

By

Published : Dec 30, 2020, 3:30 PM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಇನ್ನೊಂದೆಡೆ, ಎಣಿಕೆ ಕೇಂದ್ರದ ಬಳಿಯೇ ಹೂವಿನಮಾಲೆಗಳ ಭರ್ಜರಿ ಮಾರಾಟ ಶುರುವಾಗಿದೆ. ಸಾಮಾನ್ಯ ದಿನಗಳಲ್ಲಿ 50ರಿಂದ 100 ರೂಪಾಯಿಗೆ ಮಾರಾಟವಾಗುತ್ತಿದ್ದ ಹೂ ಮಾಲೆಗಳು ಇಂದು 200 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿವೆ.

ಹೂವಿನ ಮಾಲೆಗೆ ಬೇಡಿಕೆ

ಸ್ನೇಹಿತರು, ಬಂಧುಗಳು ಗೆದ್ದ ಅಭ್ಯರ್ಥಿಯ ಕೊರಳಿಗೆ ಹೂವಿನ ಮಾಲೆ ಹಾಕುವ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿಯೇ ಸುಮಾರು 10 ಲಕ್ಷ ರೂ ಮೌಲ್ಯದ ಹೂವಿನ ವಹಿವಾಟು ನಡೆಯುವ ಸಾಧ್ಯತೆ ಇದೆ.

ABOUT THE AUTHOR

...view details