ಕರ್ನಾಟಕ

karnataka

ETV Bharat / state

ಆ್ಯಸಿಡ್​​​ ಎರಚಿದ್ದು ಸಾಲಲಿಲ್ಲ ಅಂತಾ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಗೆ ಯತ್ನ! - ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಾರಣಾಂತಿಕವಾಗಿ ಹಲ್ಲೆ

ವ್ಯಕ್ತಿಯನ್ನು ಅಡ್ಡಗಟ್ಟಿ ಆ್ಯಸಿಡ್​ ಎರಚಿ ನಂತರ ಕೆಳಗೆ ಬಿದ್ದ ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹೆಚ್. ಹೊಸಹಳ್ಳಿ-ಶ್ರೀರಾಮಪುರ ರಸ್ತೆಯಲ್ಲಿ ನಡೆದಿದೆ.

deadly attack on man in Anekal
ಆಸಿಡ್ ಎರಚಿದ್ದು ಸಾಲಲಿಲ್ಲ ಅಂತಾ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಗೆ ಯತ್ನ

By

Published : Jan 4, 2020, 10:27 AM IST

ಆನೇಕಲ್:ದಾರಿಯಲ್ಲಿ ವೀಗೋನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಆ್ಯಸಿಡ್​​​ ಎರಚಿ ನಂತರ ಕೆಳಗೆ ಬಿದ್ದ ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹೆಚ್. ಹೊಸಹಳ್ಳಿ-ಶ್ರೀರಾಮಪುರ ರಸ್ತೆಯಲ್ಲಿ ನಡೆದಿದೆ.

ಆ್ಯಸಿಡ್​​​ ಎರಚಿದ್ದು ಸಾಲಲಿಲ್ಲ ಅಂತಾ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಹೆನ್ನಾಗರ ಹೊಸಹಳ್ಳಿಯ ಜ್ಯೋತಪ್ಪ(48) ಅಲಿಯಾಸ್ ಗುರು ಹಲ್ಲೆಗೊಳಗಾದ ವ್ಯಕ್ತಿ. ಮೈಗೆ ಬೆಂಕಿ ಹೊತ್ತಿಕೊಂಡು ಕಿರುಚಾಡುತ್ತಿದ್ದ ಜ್ಯೋತಪ್ಪನ ಕಂಡು ಪಕ್ಕದಲ್ಲೇ ರಾಗಿ ಕಣದಲ್ಲಿದ್ದ ರೈತರು ಹಾಗೂ ಸಾರ್ವಜನಿಕರು ಬಂದು ಮಣ್ಣು ಎರಚಿ ಬೆಂಕಿ ಆರಿಸಿ ಕಾಪಾಡಿದ್ದಾರೆ. ಅಷ್ಟರಲ್ಲೇ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.

ಜ್ಯೋತಪ್ಪನನ್ನು ಜಿಗಣಿ ವಿಜಯಶ್ರೀ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಶೇ. 50ಕ್ಕೂ ಹೆಚ್ಚು ದೇಹದ ಭಾಗಗಳು ಸುಟ್ಟಿವೆ. ಆಸ್ಪತ್ರೆಯಿಂದ ಜಿಗಣಿ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಸೂರ್ಯ ಸಿಟಿ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ.

ಜ್ಯೋತಪ್ಪ, ಹೆಚ್. ಹೊಸಹಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದು, ಸಣ್ಣಪುಟ್ಟ ಹಣದ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ರಝಿಯಾ ಎಂಬುವರು ಜ್ಯೋತಪ್ಪನ ಬಳಿ ಹಣದ ವ್ಯವಹಾರವಿಟ್ಟುಕೊಂಡಿದ್ದರಂತೆ. ಜ್ಯೋತಪ್ಪನ ಮನೆಯಲ್ಲಿ ಬಾಡಿಗೆಗಿದ್ದ ರಝಿಯಾ ಇದೀಗ ಶ್ರೀರಾಮಪುರಕ್ಕೆ ಜಾಗ ಬದಲಿಸಿದ್ದಾಳೆ. 30,000 ರೂಪಾಯಿ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತುಕತೆ ನಡೆದಿದೆ. ಅನಂತರ ರಸ್ತೆ ಪಕ್ಕದ ಮರದ ಮಗ್ಗುಲಲ್ಲಿ ಕಾದು ಕುಳಿತಿದ್ದು ಇಬ್ಬರು ಜ್ಯೋತಪ್ಪನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆ ವೇಳೆ ಬೈಕ್​ಗೂ ಬೆಂಕಿ ಹಚ್ಚಲಾಗಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ಜ್ಯೋತಪ್ಪ ಸಾವು ಬದುಕಿನ ನಡುವೆ ನರಳುತ್ತಿದ್ದಾನೆ.

ABOUT THE AUTHOR

...view details