ಬೆಂಗಳೂರು ಗ್ರಾಮಾಂತರ/ದೇವನಹಳ್ಳಿ:ನಾಳೆ ನಡೆಯುವ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಡಿಸಿಎಂ ಡಾ. ಸಿ ಎಸ್ ಅಶ್ವತ್ಥ್ ನಾರಾಯಣ ಅವರನ್ನ ಕೇಳಿದ್ರೆ, ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸ್ತಾರೆ ಎನ್ನುವ ಮೂಲಕ ತಮ್ಮ ಸಚಿವ ಸ್ಥಾನ ಭದ್ರವಾದ್ರೆ ಸಾಕು ಅನ್ನೋ ಧೋರಣೆಯಲ್ಲಿದ್ದಂತೆ ಕಾಣಿಸುತ್ತಿದೆ.
ಸಂಪುಟ ವಿಸ್ತರಣೆ ಬಗ್ಗೆ ಕೇಳಿದ್ರೆ ಸ್ಮೈಲ್.. ಏನ್ ಕೇಳಿದ್ರೂ ಸಿಎಂ ಹೆಸರೇಳ್ತಾರೆ ಡಿಸಿಎಂ.. - devanahalli news'
ನಾಳೆ ನಡೆಯುವ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಡಿಸಿಎಂ ಡಾ. ಸಿ ಎಸ್ ಅಶ್ವತ್ಥ್ ನಾರಾಯಣ ಅವರನ್ನ ಕೇಳಿದ್ರೆ, ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸ್ತಾರೆ ಎನ್ನುವ ಮೂಲಕ ತಮ್ಮ ಸಚಿವ ಸ್ಥಾನ ಭದ್ರವಾದ್ರೆ ಸಾಕು ಅನ್ನೋ ಧೋರಣೆ ತೋರುತ್ತಿದ್ದಾರೆ.
ಡಿಸಿಎಂ ಡಾ.ಸಿ.ಎಸ್. ಅಶ್ವಥ್ ನಾರಾಯಣ್
ದೇವನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ನಡೆಯುವ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕೇಳಿದಾಗ ಏನ್ ಹೇಳ್ಬೋಕಾ ಅಂತಾ ಗೊತ್ತಾಗದೇ ಸ್ಮೈಲ್ ಕೊಟ್ಟರು. ಪದೇಪದೆ ಆ ಬಗ್ಗೆ ಕೇಳಿದಾಗ ಸಂಪುಟ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿಯವರೇ ಎಲ್ಲವನ್ನೂ ತಿಳಿಸ್ತಾರೆ ಅಂತಾ ಹೇಳೋ ಮೂಲಕ ಜಾರಿಕೊಂಡರು.