ಕರ್ನಾಟಕ

karnataka

ETV Bharat / state

ಹೊಸಕೋಟೆ: ನವರಾತ್ರಿ ಸಂದರ್ಭ ಇವರ ಮನೆಯಲ್ಲಿ ದಸರಾ ಗೊಂಬೆಗಳದ್ದೇ ದರ್ಬಾರ್​!​​ - Dasara dolls Festival

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸ್ವಾಮಿ ವಿವೇಕಾನಂದ ನಗರದಲ್ಲಿ ವಾಸವಾಗಿರುವ ರಮೇಶ್, ವಿದ್ಯಾ ಮತ್ತು ಮುರಳಿಕೃಷ್ಣ ನಾಗರತ್ನ ಎಂಬುವರ ಕುಟುಂಬ ಕಳೆದ 25 ವರ್ಷಗಳಿಂದ ದಸರಾ ಗೊಂಬೆಗಳ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದೆ.

Hoskote
ಹೊಸಕೋಟೆ: ಮನೆ ಮನೆಗಳಲ್ಲಿ ಸಡಗರ ಹೆಚ್ಚಿಸುವ ದಸರಾ ಗೊಂಬೆಗಳ ಹಬ್ಬ..

By

Published : Oct 22, 2020, 9:39 AM IST

ಹೊಸಕೋಟೆ:ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ ದರ್ಬಾರು. ದಸರಾ ಹಬ್ಬದ ವಿಶೇಷವಾಗಿರುವ ಗೊಂಬೆಗಳು ಸೃಜನಶೀಲತೆಯ ಸಂಕೇತ. ಸೃಜನಶೀಲತೆಗೆ ಆದ್ಯತೆ ನೀಡುವ ಈ ಆಚರಣೆಗೆ ಮೈಸೂರು ಪ್ರಾಂತ್ಯದ ಪ್ರಭಾವ ಇಂದಿಗೂ ಇದೆ. ಇತ್ತೀಚಿನ ದಿನಗಳಲ್ಲಿ ದಸರಾ ಗೊಂಬೆಗಳ ಗತ್ತು ಕಡಿಮೆ ಆಗುತ್ತಾ ಬರುತ್ತಿದೆ. ಈ ಬಾರಿ ಕೊರೊನಾ ಎಫೆಕ್ಟ್​​ನಿಂದ ಈ ಆಚರಣೆ ಮತ್ತಷ್ಟು ಕಡಿಮೆ ಆಗಿದೆ. ಆದ್ರೆ ಇಲ್ಲೊಂದು ಕುಟುಂಬ ದಶಕಗಳಿಂದ ದಸರಾ ಗೊಂಬೆಗಳ ಸಾಂಪ್ರದಾಯವನ್ನು ಆಚರಿಸಿಕೊಂಡು ಬಂದಿದೆ.

ಹೊಸಕೋಟೆ: ಮನೆ ಮನೆಗಳಲ್ಲಿ ಸಡಗರ ಹೆಚ್ಚಿಸುವ ದಸರಾ ಗೊಂಬೆಗಳ ಹಬ್ಬ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸ್ವಾಮಿ ವಿವೇಕಾನಂದ ನಗರದಲ್ಲಿ ವಾಸವಾಗಿರುವ ರಮೇಶ್ ಶ್ರೀವಿದ್ಯಾ ಮತ್ತು ಮುರಳಿಕೃಷ್ಣ ನಾಗರತ್ನ ಎಂಬುವರ ಕುಟುಂಬ ಕಳೆದ 25 ವರ್ಷಗಳಿಂದ ದಸರಾ ಗೊಂಬೆಗಳ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಗೊಂಬೆಗಳನ್ನು ತಂದು ನವರಾತ್ರಿಯ ಮೊದಲ ದಿನ ದಸರಾ ಗೊಂಬೆಗಳನ್ನು ಮನೆಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ. ದಸರಾ ಗೊಂಬೆಗಳ ಪ್ರದರ್ಶನದಲ್ಲಿ 9 ಸಾಲಿನಲ್ಲಿ ಗೊಂಬೆಗಳನ್ನು ಇಟ್ಟಿದ್ದಾರೆ. ಪ್ರಮುಖವಾಗಿ ಪಟ್ಟದ ರಾಜ, ರಾಣಿ, ಅಷ್ಟ ಲಕ್ಷ್ಮೀಯರು, ಸಪ್ತ ಮಾತೆಯರು, ಶ್ರೀನಿವಾಸ ಕಲ್ಯಾಣ, ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣನ ಲೀಲೆಗಳು, ಸಮುದ್ರ ಮಂಥನ, ಶಿವ-ಪಾರ್ವತಿಯ ಕಥೆಗಳು, ನವರಾತ್ರಿ ವೈಭವ, ದುರ್ಗೆಯ ಅವತಾರಗಳು ಹೀಗೆ ಪುರಾಣದ ನಾನಾ ಕಥೆಗಳನ್ನು ಆಯ್ಕೆ ಮಾಡಿ ಗೊಂಬೆಗಳನ್ನ ಜೋಡಿಸಿದ್ದಾರೆ.

ಸಾಂಪ್ರದಾಯಿಕ ಶೈಲಿಯ ಗೊಂಬೆ ಜೋಡಣೆಯಲ್ಲಿ ಯಾವುದಾದರೂ ಪುರಾಣ ಕಥೆಗಳು, ಐತಿಹಾಸಿಕ ಕಥೆಗಳು, ಜೊತೆಗೆ ನೃತ್ಯ, ಕಲೆ, ಜಂಜೂ ಸವಾರಿ ಮುಂತಾದ ದೃಶ್ಯಗಳ ಗೊಂಬೆಗಳನ್ನು ಕೂರಿಸಲಾಗುತ್ತದೆ. ಇಂತಹ ಒಂದು ಆಚರಣೆ ನಮ್ಮ ಸಾಂಪ್ರದಾಯನ್ನು ಇಂದಿನ ಪೀಳಿಗೆಗೆ ಪರಿಚಯಿಸುತ್ತದೆ. ಆದ್ರೆ ಇತ್ತೀಚೆಗೆ ಈ ದಸರಾ ಗೊಂಬೆಗಳ ಪ್ರದರ್ಶನ ವಿರಳವಾಗಿದೆ. ಮುಂದಿನ ಪೀಳಿಗೆ ಈ ಆಚರಣೆ ಮಾಡುತ್ತದೋ, ಇಲ್ಲವೋ ಎಂದು ಕಳೆದ 25 ವರ್ಷಗಳಿಂದ ಗೊಂಬೆ ಪ್ರದರ್ಶನ ಮಾಡುತ್ತಾ ಬಂದಿರುವ ಮುರಳಿಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಈ ವೈಜ್ಞಾನಿಕ ಯುಗದಲ್ಲಿ ಯುವ ಪೀಳಿಗೆಗೆ ನಮ್ಮ ಪುರಾತನ ಆಚಾರ, ವಿಚಾರಗಳನ್ನು ತಿಳಿಸಲು ದಸರಾ ಹಬ್ಬದಲ್ಲಿ ಗೊಂಬೆಗಳ ಪ್ರದರ್ಶನ ಒಂದು ಉತ್ತಮ ಮಾರ್ಗ. ಇದೀಗ ಆ ಸಂಪ್ರದಾಯ ಸಹ ವಿರಳವಾಗುತ್ತಿರುವುದು ಬೇಸರದ ಸಂಗತಿ. ಹಲವೆಡೆ ದಸರಾ ಹಬ್ಬದ ವೇಳೆ ಗೊಂಬೆ ಸ್ಫರ್ಧೆ ಕೂಡ ಏರ್ಪಡಿಸಿ ಇನ್ನಷ್ಟು ಪ್ರೋತ್ಸಾಹಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದ ಕೆಲವೇ ಭಾಗಗಳಲ್ಲಿರುವ ಈ ಆಚರಣೆ ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಲಿ ಎಂಬುದೇ ನಮ್ಮ ಆಶಯ.

ABOUT THE AUTHOR

...view details