ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಸತತವಾಗಿ ಸುರಿಯುತ್ತಿರುವ ಮಳೆಗೆ ದಂಡಿಗಾನಹಳ್ಳಿ ಕೆರೆ 25 ವರ್ಷಗಳ ನಂತರ ಕೋಡಿ ಬಿದ್ದು ಹರಿಯುತ್ತಿದೆ. ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕೋಡಿ ಬಿದ್ದ ಕೆರೆಯ ವೈಭವ ಮತ್ತು ಬೆಳೆ ಹಾನಿಯ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
25 ವರ್ಷಗಳ ನಂತರ ಕೋಡಿ ಬಿದ್ದ ದಂಡಿಗಾನಹಳ್ಳಿ ಕೆರೆ: ಈ ದೃಶ್ಯ ಡ್ರೋನ್ನಲ್ಲಿ ಸೆರೆ - ವೆಂಕಟಗಿರಿಕೋಟೆ ಕೆರೆ
ದೇವನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಕೆರೆ 25 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಇದು ಒಂದು ಕಡೆ ಗ್ರಾಮಸ್ಥರ ಖುಷಿಗೆ ಕಾರಣವಾದ್ರೆ ಮತ್ತೊಂದೆಡೆ ಬೆಳೆ ಹಾನಿಯಾಗಿರುವುದು ರೈತರಿಗೆ ಬೇಸರ ತರಿಸಿದೆ.
ಕೋಡಿ ಬಿದ್ದ ದಂಡಿಗಾನಹಳ್ಳಿ ಕೆರೆ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ
ಕೋಡಿ ಬಿದ್ದ ದಂಡಿಗಾನಹಳ್ಳಿ ಕೆರೆ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ
ದೇವನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಕೆರೆ ಕೋಡಿ ಬಿದ್ದ ಪರಿಣಾಮ ನೀರು, ರಾಗಿ, ಜೋಳ ಬೆಳೆಗಳು ನೀರಿನಲ್ಲಿ ಮುಳುಗಿವೆ. ದ್ರಾಕ್ಷಿ ಮತ್ತು ಹಿಪ್ಪು ನೇರಳೆ ತೋಟಕ್ಕೂ ನೀರು ನುಗ್ಗಿದೆ. 25 ವರ್ಷಗಳ ನಂತರ ಕೆರೆ ಕೋಡಿ ಬಿದ್ದಿರುವುದು ಗ್ರಾಮಸ್ಥರ ಖುಷಿಗೆ ಕಾರಣವಾಗಿದೆ. ಇದೇ ವೇಳೆ ಮಳೆಯಿಂದ ಬೆಳೆ ಹಾನಿಯಾಗಿರುವುದು ಬೇಸರದ ಸಂಗತಿ. ವೆಂಕಟಗಿರಿ ಕೋಟೆ ಕೆರೆಗೆ ಈಗಾಗಲೇ ಹೆಚ್ ಎನ್ ವ್ಯಾಲಿ ನೀರನ್ನು ಬಿಡಲಾಗಿದೆ.
ಇದನ್ನೂ ಓದಿ: ಕಾಫಿನಾಡಿನಲ್ಲಿ ಮಳೆ ಅಬ್ಬರ: 50 ಕೆರೆಗಳು ಸಂಪೂರ್ಣ ಭರ್ತಿ