ದೊಡ್ಡಬಳ್ಳಾಪುರ :ನಾವು ಹಾಕಿದ ಗಾಳಕ್ಕೆ ಮರಿಮೀನು ಬಿದ್ದಿದ್ದಕ್ಕೆ ಸಂತೋಷವಾಗಿದೆ ಎಂದು ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಮಾತನಾಡಿರುವುದು.. ದೊಡ್ಡಬಳ್ಳಾಪುರ ನಗರದ ಹಾಲಿನ ಡೈರಿ ಮುಂಭಾಗದಲ್ಲಿ ನಡೆದ ಬೃಹತ್ ಹಾಲಿನ ಡೈರಿ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಸಂಸದ ಬಚ್ಚೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, 20 ವರ್ಷಗಳ ನಂತರ ಬಚ್ಚೇಗೌಡರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ ಎಂದರು.
ಬಚ್ಚೇಗೌಡರದ್ದು ದೊಡ್ಡ ಜಮೀನ್ದಾರ್ ಕುಟುಂಬ. ನೂರಾರು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದರು. ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ತರಲು ಎಸ್ ಎಂ ಕೃಷ್ಣ ಮತ್ತು ನಾನು ಕಳೆದ 20 ವರ್ಷಗಳಿಂದ ಪ್ರಯತ್ನ ಪಟ್ಟಿದ್ದೇವೆ. ಆದರೆ, ನನ್ನ ಗಾಳಕ್ಕೆ ಬಚ್ಚೇಗೌಡರು ಬೀಳಲಿಲ್ಲ. ಅವರ ಮಗ ಶರತ್ ಬಚ್ಚೇಗೌಡ ಕಚ್ಕೊಂಡ. ನಮ್ಮ ಗಾಳಕ್ಕೆ ಮರಿಮೀನಾದ್ರೂ ಬಿತ್ತಲ್ಲ ಎಂಬ ಸಂತೋಷ ಇದೆ. ಬಚ್ಚೇಗೌಡರು ನಮ್ಮ ಜಿಲ್ಲೆಯವರು, ಶರತ್ ಬಚ್ಚೇಗೌಡ ನಮ್ಮ ಜಿಲ್ಲೆಯ ಆಸ್ತಿ ಎಂದು ಹೊಗಳಿದರು.
ಓದಿ:ಕಾಂಗ್ರೆಸ್ ಬಗ್ಗೆ ನಾನ್ಯಾಕೆ ಸಾಫ್ಟ್ ಕಾರ್ನರ್ ಆಗಲಿ : ಮಾಜಿ ಸಿಎಂ ಹೆಚ್ಡಿಕೆ