ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರದಲ್ಲಿ ಸಿಲಿಂಡರ್ ಸ್ಫೋಟ: ಮನೆ ಅಗ್ನಿಗಾಹುತಿ, ಕುಟುಂಬದವರು ಬಚಾವಾಗಿದ್ದು ಹೇಗೆ? - ದೊಡ್ಡಬಳ್ಳಾಪುರದಲ್ಲಿ ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಜಖಂ

ದೊಡ್ಡಬಳ್ಳಾಪುರ ತಾಲೂಕಿನ ಉಜಿನಿ ಹೊಸಹಳ್ಳಿಯ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ ಸಿಲಿಂಡರ್ ಸ್ಫೋಟ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಜಖಂ

ದೊಡ್ಡಬಳ್ಳಾಪುರದಲ್ಲಿ ಸಿಲಿಂಡರ್ ಸ್ಫೋಟ: ಮನೆ ಸಂಪೂರ್ಣ ಜಖಂ

By

Published : Nov 2, 2019, 1:00 PM IST

ದೊಡ್ಡಬಳ್ಳಾಪುರ:ಮನೆಯಲ್ಲಿ ಯಾರು ಇಲ್ಲದ ವೇಳೆ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದ್ದು, ತೀವ್ರತೆಗೆ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಗೋಡೆಗಳು ಕುಸಿದು ಬಿದ್ದಿದೆ.

ದೊಡ್ಡಬಳ್ಳಾಪುರದಲ್ಲಿ ಸಿಲಿಂಡರ್ ಸ್ಫೋಟ: ಮನೆ ಸಂಪೂರ್ಣ ಜಖಂ

ತಾಲೂಕಿನ ಉಜಿನಿ ಹೊಸಹಳ್ಳಿಯ ನಾಗರಾಜ್ ಎಂಬುವರ ಮನೆಯಲ್ಲಿ ಘಟನೆ ನಡೆದಿದ್ದು. ನಿನ್ನೆ ರಾತ್ರಿ 2 ಗಂಟೆಯ ಸಮಯದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟಕ್ಕೆ ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ನಿನ್ನೆ ನಾಗರಾಜು ಕುಟುಂಬ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಘಟನೆಯಿಂದಾಗಿ ನಾಗರಾಜ್ ಅವರ ಮಗಳ ಮದುವೆಗಾಗಿ ತಂದಿದ್ದ ₹ 1.40 ಲಕ್ಷ ರೂ ಮೌಲ್ಯದ ಚಿನ್ನಭರಣ ಹಾಗೂ ಮನೆಯಲ್ಲಿದ್ದ ₹ 12 ಲಕ್ಷ ಮೌಲ್ಯದ ಸಾಮಾನುಗಳು ಜಖಂಗೊಂಡಿವೆ.
ಈ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details