ಕರ್ನಾಟಕ

karnataka

ಹುಷಾರ್​​​... ಬ್ಯಾಂಕ್​​ ಅಕೌಂಟ್ ಹ್ಯಾಕ್ ಮಾಡುವ ಸೈಬರ್ ಕಳ್ಳರಿದ್ದಾರೆ....!

By

Published : May 27, 2019, 5:02 PM IST

ಬ್ಯಾಂಕ್​ಗಳಲ್ಲಿ ಸೈಬರ್ ಹ್ಯಾಕ್ ರಗಳಿಂದ ದೋಖಾ ಪ್ರಕರಣಗಳು ಹೆಚ್ಚಾಗಿದ್ದು, ಹ್ಯಾಕರ್ ಗಳಿಂದ ಜನ ಬಹಳ ಸುಲಭವಾಗಿ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ಹೀಗಾಗಿ ಪೊಲೀಸರು ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡುವ ಸೈಬರ್ ಚೋರರಿದ್ದಾರೆ ಎಚ್ಚರಿಕೆ..!

ದೊಡ್ಡಬಳ್ಳಾಪುರ:ಹ್ಯಾಕರ್ ಗಳಿಂದ ಜನ ಬಹಳ ಸುಲಭವಾಗಿ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ಈ ಕುರಿತು ಎಚ್ಚೆತ್ತಿರುವ ದೊಡ್ಡಬಳ್ಳಾಪುರ ನಗರ ಪೊಲೀಸರು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ಹ್ಯಾಕಿಂಗ್ ಮುಖಾಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೋಸದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಜಾಗೃತಿಗೆ ಮುಂದಾಗಿದ್ದಾರೆ.

ನಿಮಗೆ ಯಾವುದೇ ಬ್ಯಾಂಕ್ ಮ್ಯಾನೇಜರ್ ಅಥವಾ ಯಾವುದೇ ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ ನಿಮ್ಮ ಪರ್ಸನಲ್ ಬ್ಯಾಂಕ್ ಡಿಟೈಲ್ಸ್ ಕೇಳುವುದಿಲ್ಲ. ಒಂದೊಮ್ಮೆ ಕೇಳಿದರೂ ಎಚ್ಚರಿಕೆವಹಿಸಿ. ಇಲ್ಲವಾದಲ್ಲಿ ಪದೇ ಪದೆ ಅಪರಿಚಿತ ನಂಬರ್ ನಿಂದ ಕರೆ ಬರುತ್ತಿದ್ದರೆ ಪೊಲೀಸರಿಗೆ ತಿಳಿಸಿ, ಆಗ ಮುಂದಾಗುವ ಅನಾಹುತವನ್ನ ತಪ್ಪಿಸಬಹುದು ಎಂದು ಸಾರ್ವಜನಿಕರಲ್ಲಿ ಪೊಲೀಸ್ ಇನ್ಸಪೆಕ್ಟರ್ ಕೆ.ವೆಂಕಟೇಶ್ ಮನವಿ ಮಾಡಿದ್ದಾರೆ.

ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡುವ ಸೈಬರ್ ಚೋರರಿದ್ದಾರೆ ಎಚ್ಚರಿಕೆ..!

ABOUT THE AUTHOR

...view details