'ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಲ್ಲ; ಬಾಲ ಬಿಚ್ಚಿದ್ರೆ ಜೆಸಿಬಿ, ಬುಲ್ಡೋಜರ್ ಹೋಗುತ್ತದೆ' - ದೇವನಹಳ್ಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿದ ಸಿ ಟಿ ರವಿ
ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನ್ನಿಸಲ್ಲ, ಬದಲಿಗೆ ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡ್ತೀವಿ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಯಾರಾದ್ರು ಬಾಲ ಬಿಚ್ಚಿದರೆ ಮನೆಗೆ ಜೆಸಿಬಿ, ಬುಲ್ಡೋಜರ್ ಹೋಗುತ್ತವೆ ಎಂದು ಹೇಳಿದ ಸಿ ಟಿ ರವಿ
ದೇವನಹಳ್ಳಿ: ದೇಶದಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸೋ ಕಾಲ ಇತ್ತು. ಈಗ ಯಾರಾದ್ರೂ ಬಾಲ ಬಿಚ್ಚಿದರೆ ಜೆಸಿಬಿ, ಬುಲ್ಡೋಜರ್ ಹೋಗುತ್ತದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದರು.