ಕರ್ನಾಟಕ

karnataka

ETV Bharat / state

ಆನೇಕಲ್: ಮಹಿಳೆಯ ಕುತ್ತಿಗೆಗೆ ಇರಿದು, ಯುವಕನಿಂದ ಆತ್ಮಹತ್ಯೆ ಯತ್ನ - etv bharat kannada

ಮಹಿಳೆ ಕುತ್ತಿಗೆಗೆ ಇರಿದು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆನೇಕಲ್​ನಲ್ಲಿ ನಡೆದಿದೆ.

crime-young-man-tried-to-attempt-suicide-after-stabbing-woman-in-anekal
ಮಹಿಳೆಯ ಕುತ್ತಿಗೆಗೆ ಇರಿದು, ಆತ್ಮಹತ್ಯೆಗೆ ಯತ್ನಿಸಿದ ಯುವಕ

By

Published : Jun 23, 2023, 8:17 PM IST

ಆನೇಕಲ್(ಬೆಂಗಳೂರು):ಮಹಿಳೆ ಕುತ್ತಿಗೆಗೆ ಇರಿದು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆನೇಕಲ್ ಪಟ್ಟಣದಲ್ಲಿ ಇಂದು ನಡೆದಿದೆ. ತಮಿಳುನಾಡಿನ ಹೊಸೂರು ಮೂಲದ ಮಿಥುನ್ ಎಂಬಾತ ಬಹದ್ದೂರ್​ಪುರ ಯುವತಿಯ ಕುತ್ತಿಗೆಗೆ ಇರಿದಿದ್ದಾನೆ. ಸದ್ಯ ಇಬ್ಬರನ್ನೂ ಆನೇಕಲ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವತಿಯ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕಳೆದೆರಡು ವರ್ಷಗಳಿಂದ ಮಿಥುನ್ ಮತ್ತು ಯುವತಿ ಆನೇಕಲ್​ನ ಟ್ರೆಂಡ್ಸ್​ ಬಟ್ಟೆ ಮಳಿಗೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಸ್ನೇಹ ಉಂಟಾಗಿತ್ತು. ಯುವತಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದು ಮಿಥುನ್​ಗೆ ಗೊತ್ತಿದ್ದರೂ, ಇಬ್ಬರ ಮಧ್ಯೆ ವಿವಾಹೇತರ ಸಂಬಂಧ ಏರ್ಪಟ್ಟಿತ್ತು. ಈ ವಿಚಾರ ಮನೆಯವರಿಗೆ ತಿಳಿದು, ಹೊಸೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೊನೆಗೆ ರಾಜಿ ಸಂಧಾನದಿಂದ ಇತ್ಯರ್ಥವಾಗಿತ್ತು.

ಇಷ್ಟಾದರೂ ಮಿಥುನ್ ಬೆನ್ನುಬಿದ್ದಿದ್ದ. ಮಾತ್ರವಲ್ಲದೇ ಇದೇ ವಿಷಯಕ್ಕೆ ಎರಡು ದಿನಗಳ ಹಿಂದೆ ವಿಷ ಕುಡಿದು ಆಸ್ಪತ್ರೆಗೂ ದಾಖಲಾಗಿದ್ದ. ಹೊಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಮಿಥುನ್ ಇಂದು ನೇರವಾಗಿ ಯುವತಿಯ ಮನೆಗೆ ಬಂದಿದ್ದಾನೆ. ಆಸ್ಪತ್ರೆಯಿಂದಲೇ ತಂದಿದ್ದ ಕತ್ತರಿ ಮೂಲಕ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಸದ್ಯ ಚಿಂತಾಜನಕ ಸ್ಥಿತಿಯಲ್ಲಿರುವ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:Women Sucide: ಬೆಂಗಳೂರಿನಲ್ಲಿ ಲಖನೌ ಮೂಲದ ಮಹಿಳೆ ಮನನೊಂದು ಆತ್ಮಹತ್ಯೆ

ಪತಿ ಕೊಂದ ಪತ್ನಿ ಸೇರಿ ನಾಲ್ವರು ಅಂದರ್​:ಮತ್ತೊಂದೆಡೆ,ಪ್ರಿಯತಮನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿದ್ದ ಮಹಿಳೆ ಹಾಗೂ ಇತರ ಮೂವರು ಆರೋಪಿಗಳನ್ನು ಬೆಳಗಾವಿಯ ಎಪಿಎಂಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿವಾಹೇತರ ಸಂಬಂಧ ಹೊಂದಿದ್ದ ಪತ್ನಿ ಪ್ರಿಯತಮನೊಂದಿಗೆ ಸೇರಿ ಪತಿಯನ್ನು ಕೊಲೆಗೈದು ಮೂರು ತಿಂಗಳ ಹಿಂದೆ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರು ಆಕೆಯೇ ಆರೋಪಿ ಎನ್ನುವುದನ್ನು ಬಯಲಿಗೆಳೆದಿದ್ದಾರೆ.

ಬೆಳಗಾವಿಯ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ (38) ಕೊಲೆಯಾಗಿದ್ದರು. ಸಂಧ್ಯಾ, ಬಾಳು ಬಿರಂಜೆ, ಜಯ ಸಾಸನೆ, ನಿತಿನ್ ಅವಳೆ ಬಂಧಿತ ಆರೋಪಿಗಳು. ರಮೇಶ್ ವೃತ್ತಿಯಲ್ಲಿ ಪೇಂಟರ್ ಆಗಿದ್ದರು. ಕಳೆದ ಮಾರ್ಚ್ 28 ರಂದು ಮನೆಯಲ್ಲಿ ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದರು. ವಾರಗಳು ಕಳೆದರೂ ಪತ್ತೆಯಾಗಿರಲಿಲ್ಲ. ಏಪ್ರಿಲ್ 5ರಂದು ತನ್ನ ಪತಿ ನಾಪತ್ತೆ ಆಗಿದ್ದಾರೆಂದು ಸಂಧ್ಯಾ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.

ನಂತರ ಪತಿ ಬೇರೆ ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ರಮೇಶ್​ ಫೋನ್ ಮನೆಯಲ್ಲೇ ಇದ್ದರೂ ಆತನ ಯಾವೊಬ್ಬ ಗೆಳೆಯರು ಕರೆ ಮಾಡದಿದ್ದಾಗ ಪೋಷಕರಿಗೆ ಸಂಶಯ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಪಿಎಂಸಿ ಠಾಣೆ ಪೊಲೀಸರು ಸಂಧ್ಯಾ ಹಾಗೂ ರಮೇಶ್‌ನ ಸ್ನೇಹಿತರನ್ನು ಕರೆಸಿ ವಿಚಾರಣೆ ಮಾಡಿದಾಗ ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದರು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ತಾವೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ABOUT THE AUTHOR

...view details