ದೊಡ್ಡಬಳ್ಳಾಪುರ : ಜಮೀನು ವ್ಯವಹಾರವನ್ನು ಮಾಡಿಸಿದ್ದ ಮಧ್ಯವರ್ತಿಗೆ ಭೂಮಿ ಖರೀದಿ ಮಾಡಿದ್ದ ವ್ಯಕ್ತಿ ಕಮಿಷನ್ ರೂಪದಲ್ಲಿ 5 ಲಕ್ಷದ ಚೆಕ್ ನೀಡಿದ್ದಾರೆ. ಚೆಕ್ ಪಡೆದ ಮಧ್ಯವರ್ತಿ 5 ಲಕ್ಷದ ಬದಲಿಗೆ 65 ಲಕ್ಷ ರೂಪಾಯಿ ಎಂದು ಬರೆದುಕೊಂಡು ಹಣ ಡ್ರಾ ಮಾಡಲು ಬ್ಯಾಂಕ್ಗೆ ಹೋಗಿ ತಗಲಾಕಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯ ದರ್ಗಾಪುರ ಸರ್ವೆ ನಂಬರ್ 32/6 ಮತ್ತು 32/4 ರಲ್ಲಿ ಒಟ್ಟು ಎರಡು ಎಕರೆಯನ್ನು ಜಮೀನು ಮಾಲೀಕರಿಂದ ಆಂಜಿನಪ್ಪ ಎಂಬುವರು ಜಿಪಿಎ ಮಾಡಿಸಿಕೊಂಡಿದ್ದಾರೆ. ಈ ವ್ಯವಹಾರ ಎಂ ಸಿ ಚಂದ್ರಶೇಖರ್ ಎಂಬಾತನ ಮುಂದಾಳತ್ವದಲ್ಲಿ ನಡೆದಿತ್ತು. ಸದರಿ ಕೆಲಸಕ್ಕೆ ಮಧ್ಯವರ್ತಿಯು ಏಜೆಂಟ್ ಕಮಿಷನ್ ಆಗಿ 10 ಲಕ್ಷ ರೂ. ಗೆ ಮಾತನಾಡಿದ್ದರು. ಇದಕ್ಕಾಗಿ ಜಮೀನು ಖರೀದಿ ಮಾಡಿದ್ದ ಆಂಜಿನಪ್ಪ, ಚಂದ್ರಶೇಖರ್ ಅವರಿಗೆ ತಲಾ ಐದು ಲಕ್ಷ ರೂ.ಗಳ ಎರಡು ಚೆಕ್ಗಳನ್ನು ನೀಡಿದ್ದರು. ಮೊದಲ ಚೆಕ್ ಡ್ರಾ ಮಾಡಿಕೊಂಡಿದ್ದ ಚಂದ್ರಶೇಖರ್, ಎರಡನೇ ಚೆಕ್ ಡ್ರಾ ಮಾಡಿಕೊಳ್ಳುವ ಮುನ್ನ ಅತಿಯಾಸೆಗೆ ಬಿದ್ದು 5 ಎಂಬ ಅಂಕಿಯ ಹಿಂದೆ ಯಾವುದೇ ಅನುಮಾನ ಬಾರದಂತೆ 6 ನಂಬರ್ ಅನ್ನು ಬರೆದು ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೋಗಿದ್ದಾನೆ.
ಇದನ್ನೂ ಓದಿ :ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅಪರಾಧಿ ; ಹಣ ಪಾವತಿಗೆ ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ