ಆನೇಕಲ್: ದೇಶಾದ್ಯಂತ ಕೊರೊನಾ ಅಟ್ಟಹಾಸಕ್ಕೆ ಜನ ತತ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಕೇವಲ ಹೇಳಿಕೆಗಳಲ್ಲಷ್ಟೇ ಕೇಂದ್ರದಿಂದ 20ಲಕ್ಷ ಕೋಟಿ ಹಣವನ್ನು ನೀಡಿದೆ. ಸರ್ಕಾರ ನೈಜವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂದು ಸಿಪಿಐ(ಎಂ) ಪಕ್ಷದ ಕಾಮ್ರೇಡ್'ಗಳು ಇಂದು ಪ್ರತಿಭಟನೆ ನಡೆಸಿದರು.
ಆನೇಕಲ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ - CPI (M) protests against central government
ಆನೇಕಲ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ(ಎಂ) ವತಿಯಿಂದ ಪ್ರತಿಭಟನೆ ನಡೆಯಿತು.
![ಆನೇಕಲ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ ಸಿಪಿಐ(ಎಂ) ಪ್ರತಿಭಟನೆ](https://etvbharatimages.akamaized.net/etvbharat/prod-images/768-512-7644244-1056-7644244-1592318547968.jpg)
ಸಿಪಿಐ(ಎಂ) ಪ್ರತಿಭಟನೆ
ಸಿಪಿಐ(ಎಂ) ಪ್ರತಿಭಟನೆ
ಈಗಾಗಲೇ ಪಡಿತರದಾರರಿಗೆ ನೀಡುತ್ತಿರುವ ತಲಾ ಹತ್ತು ಕಿಲೋ ದಿನಸಿಯನ್ನು, ತೆರಿಗೆಯೇತರ ಜನರಿಗೆ ಆರು ತಿಂಗಳ ಕಾಲ ವಿಸ್ತರಿಸಬೇಕು, ಅಲ್ಲದೆ ಪ್ರತಿ ಕುಟುಂಬ ನಿರ್ವಹಣೆಗೆ 7,500ರೂ ಗಳನ್ನು ಪ್ರತಿ ತಿಂಗಳು ಒದಗಿಸಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತಪ್ಪಿಸಬೇಕೆಂದು ಕೋರಿದರು. ತಹಶೀಲ್ದಾರರಿಗೆ ಮನವಿ ನೀಡಿ ತಾಲೂಕು ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
TAGGED:
ಸಿಪಿಐ(ಎಂ) ಪ್ರತಿಭಟನೆ