ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರದಲ್ಲಿ ಹಸುಗಳ ಕಳ್ಳತನ: ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - ಎರಡು ಗರ್ಭಿಣಿ ಹಸು

ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕಾಲೇಜು ಬಳಿಯ ವಿದ್ಯಾನಗರದಲ್ಲಿ ರಮೇಶ್​ ಮತ್ತು ಹನುಮಂತ ಎಂಬುವವರಿಗೆ ಸೇರಿದ ಹಸುಗಳ ಕಳ್ಳತನ ಆಗಿದೆ. ಕಳ್ಳರು ಹಸುಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Cow theft in Doddaballapur
ದೊಡ್ಡಬಳ್ಳಾಪುರದಲ್ಲಿ ಹಸುಗಳ ಕಳ್ಳತನ

By

Published : Aug 25, 2022, 3:19 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿದ್ದ ಎರಡು ಗರ್ಭ ಧರಿಸಿದ್ದ ಹಸುಗಳು ಸೇರಿದಂತೆ ಒಂದು ಗಂಡು ಕರುವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಗರದ ಕೊಂಗಾಡಿಯಪ್ಪ ಕಾಲೇಜ್ ಬಳಿಯ ವಿದ್ಯಾನಗರದಲ್ಲಿ ನಡೆದಿದೆ. ಕಳ್ಳರು ಹಸುಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಮೇಶ್ ಎಂಬುವವರಿಗೆ ಸೇರಿದ ಒಂದು ಗರ್ಭ ಧರಿಸಿದ್ದ ಹಸು ಮತ್ತು ಒಂದು ಕರುವನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವರ ಮನೆಯ ಪಕ್ಕದ ಹನುಮಂತ ಎಂಬುವವರ ಒಂದು ಗರ್ಭಿಣಿ ಹಸುವನ್ನೂ ಕಳ್ಳರು ಕದ್ದಿದ್ದಾರೆ. ಆಗಸ್ಟ್ 19 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಅಂದು ರಾತ್ರಿ 8 ಮತ್ತು 10 ಗಂಟೆಗೆ ರಮೇಶ್ ಹಸುಗಳಿಗೆ ಮೇವು ಹಾಕಿ ಮಲಗಿದ್ದರು. ಅದೇ ದಿನ ಮಧ್ಯರಾತ್ರಿ ಮನೆಯ ಬಳಿ ಗಲಾಟೆಯಾಗುತ್ತಿತ್ತು. ಆಗ ಗಾಂಜಾ ಹುಡುಗರ ಗಲಾಟೆ ಎಂದು ಸುಮ್ಮನೆ ಮಲಗಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಹಸುಗಳ ಕಳ್ಳತನ

ಬೆಳಗ್ಗೆ ಹಾಲು ಕರೆಯಲು ಹೋದಾಗ 8 ಹಸುಗಳಲ್ಲಿ ಮೂರು ಹಸುಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಮಧ್ಯರಾತ್ರಿ ಬಂದಿರುವ ಕಳ್ಳರು ಮನೆಯ ಮುಂಭಾಗದಲ್ಲಿ ಕಟ್ಟಲಾಗಿದ್ದ ಎರಡು ಗರ್ಭಿಣಿ ಮತ್ತು ಒಂದು ಕರುವನ್ನು ಕದ್ದೊಯ್ದಿದ್ದಾರೆ. ಆಗಸ್ಟ್ 8 ರಂದು ಸಹ ಇದೇ ಏರಿಯಾದಲ್ಲಿ ಹಸುಗಳ ಕಳ್ಳತನವಾಗಿತ್ತು.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ವೃದ್ಧೆ ಸಾಕಿದ್ದ 10ಕ್ಕೂ ಹೆಚ್ಚು ಜಾನುವಾರುಗಳ ಕಳ್ಳತನ: ಬೀದಿಗೆ ಬಿದ್ದ ಹಿರಿಯ ಜೀವ

ABOUT THE AUTHOR

...view details