ಬೆಂಗಳೂರು: ಕೊರೊನಾ ವೈರಸ್ ಹೇಗೆಲ್ಲ ಹರಡಬಹುದು ಎಂಬುದನ್ನು ಊಹಿಸಲು ಕೂಡ ಕಷ್ಟವಾಗುತ್ತಿದೆ. ದಿನೇ ದಿನೆ ಹೊಸ ರೂಪ ಪಡೆದುಕೊಳ್ಳುತ್ತಿರುವ ಕೋವಿಡ್ ಸೋಂಕಿನ ಕುರಿತು, ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ದೇಶದಲ್ಲೇ ಮೊದಲ ಬಾರಿಗೆ ಅಧ್ಯಯನ ನಡೆಸಿರುವ ನಗರದ ಮಿಂಟೋ ಆಸ್ಪತ್ರೆಯ ತಜ್ಞರು, ಕೊರೊನಾ ರೋಗಿಗಳ ಕಣ್ಣೀರಿನಲ್ಲಿ ವೈರಸ್ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಕೊರೊನಾ ರೋಗಿಯ ಕಣ್ಣೀರಿನಲ್ಲೂ ಇದೆ ವೈರಸ್: ಮಿಂಟೋ ಆಸ್ಪತ್ರೆಯ ತಜ್ಞರಿಂದ ಅಧ್ಯಯನ
ವಿಕ್ಟೋರಿಯಾ ಆಸ್ಪತ್ರೆಯ 45 ಕೊರೊನಾ ಪಾಸಿಟಿವ್ ರೋಗಿಗಳ ಕಣ್ಣೀರನ್ನು ಅಧ್ಯಯನಕ್ಕೆ ಒಳಪಡಿಸಿರುವ ತಜ್ಞರ ತಂಡ, ರೋಗ ಲಕ್ಷಣ ಇಲ್ಲದ ಒಬ್ಬ ರೋಗಿಯ ಕಣ್ಣಿನ ದ್ರವದಲ್ಲಿ ವೈರಸ್ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಕೊರೊನಾ ರೋಗಿಯ ಕಣ್ಣೀರಿನಲ್ಲೂ ಇದೆ ವೈರಸ್
ವಿಕ್ಟೋರಿಯಾ ಆಸ್ಪತ್ರೆಯ 45 ಕೊರೊನಾ ಪಾಸಿಟಿವ್ ರೋಗಿಗ ಕಣ್ಣೀರನ್ನು ಅಧ್ಯಯನಕ್ಕೆ ಒಳಪಡಿಸಿರುವ ತಜ್ಞರ ತಂಡ, ರೋಗ ಲಕ್ಷಣ ಇಲ್ಲದ ಒಬ್ಬ ರೋಗಿಯ ಕಣ್ಣಿನ ದ್ರವದಲ್ಲಿ ವೈರಸ್ ಇರುವುದು ಪತ್ತೆ ಹಚ್ಚಿದ್ದಾರೆ.
ಕಣ್ಣಿನ ದ್ರವದಲ್ಲಿ ವೈರಸ್ ಪತ್ತೆಯಾದವರು ಕಣ್ಣನ್ನು ಮುಟ್ಟಿ ಯಾವುದಾದರೂ ವಸ್ತುಗಳನ್ನು ಮುಟ್ಟಿದರೆ ವೈರಸ್ ಅಂಟಿಕೊಳ್ಳುತ್ತದೆ. ಆ ವಸ್ತುಗಳನ್ನು ಇತರರು ಸ್ಪರ್ಶಿಸಿದರೆ ಕೊರೊನಾ ತಗುಲುವ ಸಾಧ್ಯತೆಯಿದೆ. ಜೊತೆಗೆ ಕಣ್ಣಿನ ವೈದ್ಯರಿಗೂ ಇದರಿಂದ ಅಪಾಯ ಎದುರಾಗಿತ್ತು. ಕಣ್ಣು ತಪಾಸಣೆಗೆ ಬರುವ ರೋಗಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.