ಬೆಂಗಳೂರು ಗ್ರಾಮಾಂತರ ಡಿಹೆಚ್ಒ ವಿಜಯೇಂದ್ರ ದೇವನಹಳ್ಳಿ(ಬೆಂ.ಗ್ರಾ): ಕೊರೊನಾ ಹೊಸತಳಿಯ ಆತಂಕದ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಡಿಹೆಚ್ಒ ವಿಜಯೇಂದ್ರ ತಿಳಿಸಿದರು.
ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊರೊನಾ ತಡೆಗಟ್ಟಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂಬ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿ, ನಿತ್ಯ ವಿದೇಶಗಳಿಂದ ಬರುವವರಲ್ಲಿ ಶೇ2ರಷ್ಟು ಪ್ರಯಾಣಿಕರನ್ನು ಟೆಸ್ಟಿಂಗ್ಗೆ ಒಳಪಡಿಸಲಾಗುತ್ತಿದ್ದು, 100 ರಿಂದ 150 ಜನರ ಸ್ಯಾಂಪಲ್ ತೆಗೆಯಲಾಗುತ್ತಿದೆ ಎಂದರು.
ಅಲ್ಲದೇ ಕಳೆದ ನವೆಂಬರ್ನಲ್ಲಿ 7 ಜನರಲ್ಲಿ ಮತ್ತು ಈ ತಿಂಗಳು ಬೆಂಗಳೂರಿಗೆ ಬಂದ 8 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಅವರ ಸ್ಯಾಂಪಲ್ ಪಡೆದು ಜಿನೋಟಿಕ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ. ಪಾಸಿಟಿವ್ ಬಂದವರ ವಿಳಾಸ ಪೋನ್ ನಂಬರ್ ಪಡೆದುಕೊಂಡು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇನ್ನು ಟ್ರೇಸಿಂಗ್ ಟೆಸ್ಟಿಂಗ್ ಹೆಚ್ಚಳ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಏರ್ಪೋಟ್ಗೆ ಬರುವ ಪ್ರಯಾಣಿಕರ ಮೇಲೆ ಮತ್ತಷ್ಟು ನಿಗಾ ಇಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋವಿಡ್ ಮಾರ್ಗಸೂಚಿ ಪ್ರಕಟ: ಇಂದಿನಿಂದ ಜಾರಿ