ಕರ್ನಾಟಕ

karnataka

ETV Bharat / state

ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೂ ತಟ್ಟಿದ Covid Effect: ಹುಂಡಿ ಹಣ ಸಂಗ್ರಹದಲ್ಲಿ ಗಣನೀಯ ಇಳಿಕೆ! - ಕೋವಿಡ್​​

ಘಾಟಿ ಸುಬ್ರಹ್ಮಣ್ಯ ದೇಗುಲದ ಆದಾಯದ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ. ದೇಗುಲಕ್ಕೆ ಬರುವ ಆದಾಯದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.

ಘಾಟಿ ಸುಬ್ರಹ್ಮಣ್ಯ ದೇಗುಲದ ಆದಾಯದ ಮೇಲೂ ಕೊರೊನಾ ಕರಿಛಾಯೆ
ಘಾಟಿ ಸುಬ್ರಹ್ಮಣ್ಯ ದೇಗುಲದ ಆದಾಯದ ಮೇಲೂ ಕೊರೊನಾ ಕರಿಛಾಯೆ

By

Published : Jul 20, 2021, 7:16 AM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ನಗರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೂ ಕೋವಿಡ್​​ ಎಫೆಕ್ಟ್​ ತಟ್ಟಿದೆ. ಲಾಕ್​ಡೌನ್​​ ಆದ ಹಿನ್ನೆಲೆ ಹುಂಡಿ ಹಣ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.

ಘಾಟಿ ಸುಬ್ರಹ್ಮಣ್ಯ ದೇಗುಲದ ಆದಾಯದ ಮೇಲೂ ಕೊರೊನಾ ಕರಿಛಾಯೆ

ಇಂದು ನಡೆದ ಹುಂಡಿ ಹಣದ ಎಣಿಕೆ ಕಾರ್ಯದಲ್ಲಿ 32, 26, 593 ರೂಪಾಯಿ ಸಂಗ್ರಹವಾಗಿದೆ. ಜೊತೆಗೆ 12,400 ರೂ. ಮೌಲ್ಯದ ಬೆಳ್ಳಿ, 3 ಗ್ರಾಂ 450 ಮಿಲಿ ಚಿನ್ನ, 20 ಸಾವಿರ ಮೌಲ್ಯದ 4 ಗ್ರಾಂ ಪ್ಲಾಟಿನಂ ಸರ ಲಭ್ಯವಿದೆ.

ಕಳೆದ ಮಾರ್ಚ್ 29 ರಂದು ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಆ ವೇಳೆ 63,83,963 ರೂಪಾಯಿ ಸಂಗ್ರಹವಾಗಿತ್ತು. ಲಾಕ್​ಡೌನ್ ಹಿನ್ನೆಲೆ, ದೇಗುಲಕ್ಕೆ ಬರುತ್ತಿದ್ದ ಆದಾಯ ಗಣನೀಯವಾಗಿ ಕುಸಿದಿದೆ.

ಇದನ್ನೂ ಓದಿ : ಇಂದು ದ್ವಿತೀಯ PUC ಫಲಿತಾಂಶ ಪ್ರಕಟ.. Result ತಿಳಿಯಲು ಹೀಗೆ ಮಾಡಿ

ಹುಂಡಿ ಹಣ ಎಣಿಕೆ ಸಮಯದಲ್ಲಿ ಮುಜರಾಯಿ ತಹಶೀಲ್ದಾರ್​​ ಜಿ.ಜೆ. ಹೇಮಾವತಿ, ಅಧೀಕ್ಷಕ ರಘು ಹುಚ್ಚಪ್ಪ ಸೇರಿ ಹಲವರು ಉಪಸ್ಥಿತರಿದ್ದರು.

ABOUT THE AUTHOR

...view details