ಆನೇಕಲ್ :ಸರ್ಜಾಪುರ ಹೋಬಳಿ ಮುಗಳೂರು ಗ್ರಾಮ ಪಂಚಾಯತ್‌ನ ತಿಂಡ್ಲು ಗ್ರಾಮದ ಬಳಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಬೃಹತ್ ಕಟ್ಟಡದಲ್ಲಿ 150 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತಾತ್ಕಾಲಿಕವಾಗಿ ತೆರೆಯಲಾಗುವುದು ಎಂದು ಸಂಸದ ಡಾ ಎ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಜೊತೆ ತಿಂಡ್ಲುವಿನ ಸರ್ಕಾರಿ ಕಟ್ಟಡವನ್ನು ವೀಕ್ಷಿಸಿ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.