ಕರ್ನಾಟಕ

karnataka

ETV Bharat / state

ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಸೋಂಕು ದೃಢ - ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದವರಲ್ಲಿ ಕೊರೊನಾ ಪತ್ತೆ

ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರು ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

Coronavirus found two people from South Africa t
ಸೌತ್​ ಆಫ್ರಿಕಾದಿಂದ ಬಂದವರಲ್ಲಿ ಕೋವಿಡ್​ ಪತ್ತೆ

By

Published : Nov 27, 2021, 5:34 PM IST

Updated : Nov 27, 2021, 5:47 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಸೌತ್​ ಆಫ್ರಿಕಾದಲ್ಲಿ ಒಮಿಕ್ರೋನ್ ಕೋವಿಡ್ ರೂಪಾಂತರಿ ವೈರಸ್ ಕಾಣಿಸಿಕೊಂಡಿದ್ದು, ಇದೀಗ ಅಲ್ಲಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ನ.01 ರಿಂದ ಇವತ್ತಿನವರೆಗೆ ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಸುಮಾರು 94 ಪ್ರಯಾಣಿಕರು ಆಗಮಿಸಿದ್ದು, ಆ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಸೋಂಕು ಕಂಡು ಬಂದ ಪ್ರಯಾಣಿಕರನ್ನು ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಒಬ್ಬರನ್ನು ಕ್ವಾರಂಟೈನ್ ಮಾಡಲಾಗಿದ್ದು, ಮತ್ತೊಬ್ಬರನ್ನು ಖಾಸಗಿ ಹೋಟೆಲ್​​​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಹೊಸ ತಳಿಯ ವೈರಸ್ ಕಂಡು ಬಂದಿರುವುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಒಮಿಕ್ರೋನ್ ರೂಪಾಂತರಿ ಕೋವಿಡ್ ಆತಂಕ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ‌ ಹೈ ಅಲರ್ಟ್

Last Updated : Nov 27, 2021, 5:47 PM IST

ABOUT THE AUTHOR

...view details