ದೊಡ್ಡಬಳ್ಳಾಪುರ: ಮಹಾಮಾರಿ ಕೊರೊನಾ ಸೋಂಕು ದಿನೇ - ದಿನೆ ಹೆಚ್ಚುತ್ತಿದ್ದು, ತಾಲೂಕಿನಲ್ಲಿಂದು ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ದೊಡ್ಡಬಳ್ಳಾಪುರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ - ದೊಡ್ಡಬಳ್ಳಾಪುರದಲ್ಲಿ ಇಬ್ಬರಿಗೆ ಕೊರೊನಾ
ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೊಸಹಳ್ಳಿ ತಾಂಡಾದ ಮೂಲ ನಿವಾಸಿಯಾದ 45 ವರ್ಷದ ವ್ಯಕ್ತಿ (P-2331)ಗೆ ಹಾಗೂ ಭಕ್ತರಹಳ್ಳಿ ನಿವಾಸಿಯಾದ 27 ವರ್ಷದ ಪೇದೆ (P-2332)ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ತಾಲೂಕಿನ ಹೊಸಹಳ್ಳಿ ತಾಂಡಾದ ಮೂಲ ನಿವಾಸಿಯಾದ 45 ವರ್ಷದ ವ್ಯಕ್ತಿ (P-2331), ಕಳೆದ ಐದು ವರ್ಷದಿಂದ ಮುಂಬೈನಲ್ಲಿ ನೆಲೆಸಿದ್ದು, P-1606, P-1607, P-1608 ಸಂಪರ್ಕ ಹೊಂದಿದ್ದರು. ಲಾಕ್ಡೌನ್ ಸಡಿಲಿಕೆ ಹಿನ್ನೆಲೆ, ಗ್ರಾಮಕ್ಕೆ ಹಿಂದಿರುಗುವ ಮಾರ್ಗದ ವೇಳೆ ಆರೋಗ್ಯ ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು ತಾಲೂಕಿನ ಭಕ್ತರಹಳ್ಳಿ ನಿವಾಸಿಯಾದ 27 ವರ್ಷದ ಪೇದೆ (P-2332)ಗೆ ಸೋಂಕು ತಗುಲಿದೆ. ಇವರು ಹಾಸನ ಜಿಲ್ಲೆಯ ಕಂಟೇನ್ಮೆಂಟ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ P-1993ರ ಸಂಪರ್ಕ ಹೊಂದಿದ್ದ ಹಿನ್ನೆಲೆಯಿದ್ದು, ಆರೋಗ್ಯ ತಪಾಸಣೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಇಬ್ಬರು ಕೊರೊನಾ ಸೋಂಕಿತರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.