ಬೆಂಗಳೂರು: ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದಲ್ಲಿ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಕೊರೊನಾ ನಿಯಂತ್ರಣದ ಪಂಚಾಯತಿ ಟಾಸ್ಕ್ ಫೋರ್ಸ್ ಟೀಂ ಅಂಗಡಿಗಳಲ್ಲಿದ್ದ ತಂಬಾಕು ಸೇರಿದಂತೆ ಚೂಯಿಂಗ್ ಗಮ್, ಪಾನ್ ಮಸಾಲಾ ಪ್ಯಾಕೇಟ್ಗಳನ್ನು ವಶಕ್ಕೆ ಪಡೆದಿದೆ.
ನೆಲಮಂಗಲದಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ದಾಳಿ: ನಿಷೇಧಿತ ವಸ್ತುಗಳು ವಶಕ್ಕೆ! - ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಕೊರೊನಾ ಟಾಸ್ಕ್ ಫೋರ್ಸ್ ತಂಡ, ತಂಬಾಕು ಸೇರಿ ಚೂಯಿಂಗ್ ಗಮ್, ಪಾನ್ ಮಸಾಲಾ ಪ್ಯಾಕೇಟ್ಗಳನ್ನು ವಶಕ್ಕೆ ಪಡೆದಿದೆ.
ನೆಲಮಂಗಲದಲ್ಲಿ ಕೊರೊನಾ ಟಾಸ್ಕ್ಫೋರ್ಸ್ ದಾಳಿ
ಟಾಸ್ಕ್ ಫೋರ್ಸ್ ತಂಡದ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದು, ಸಾವಿರಾರು ರೂಪಾಯಿ ಮೌಲ್ಯದ ತಂಬಾಕು ವಶಕ್ಕೆ ಪಡೆದಿದ್ದಾರೆ. ದ್ವಿಚಕ್ರ ವಾಹನಗಳಲ್ಲಿದ್ದ ಹಿಂಬದಿ ಸವಾರರಿಗೆ ಬ್ರೇಕ್ ಹಾಕಿರುವ ಪೊಲೀಸರು, ಕೊರೊನಾ ನಿಯಂತ್ರಣದ ಪಾಠ ಹೇಳಿದ್ದಾರೆ. ಮಾಸ್ಕ್ ಹಾಕದೇ ಇದ್ದವರಿಗೆ ವಾರ್ನಿಂಗ್ ನೀಡಿದ್ದಾರೆ.
ತ್ಯಾಮಗೊಂಡ್ಲು ಪೊಲೀಸ್ ಠಾಣೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಲಾಕ್ಡೌನ್ ವೇಳೆ ನಿಷೇಧವಿರುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.